ನಾನು ಜೆಡಿಎಸ್ ಪಕ್ಷ ವಿಸರ್ಜಿಸುತ್ತೇನೆ ಎಂದಿಲ್ಲ: ಕಾಂಗ್ರೆಸ್ ನಿಂದ ಸುಳ್ಳು ಪ್ರಚಾರ- ಹೆಚ್.ಡಿ ಕುಮಾರಸ್ವಾಮಿ ಕಿಡಿ.

ರಾಯಚೂರು,ಜನವರಿ,28,2023(www.justkannada.in):  ನಾನು ಜೆಡಿಎಸ್ ಪಕ್ಷವನ್ನ ವಿಸರ್ಜಿಸುತ್ತೇನೆ ಎಂದು ಹೇಳಿಲ್ಲ. ಪಂಚರತ್ನ ಯೋಜನೆ ಜಾರಿ ಮಾಡದಿದ್ದರೇ ಪಕ್ಷ ವಿಸರ್ಜಿಸುತ್ತೇನೆ ಎಂದು ಹೇಳಿದ್ದೇನೆ. ಆದರೆ ಕಾಂಗ್ರೆಸ್ ಸುಳ್ಳು ಪ್ರಚಾರ ಮಾಡುತ್ತಿದೆ ಎಂದು ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಕಿಡಿಕಾರಿದರು.

ರಾಯಚೂರಿನಲ್ಲಿ ಇಂದು ಮಾತನಾಡಿ ಕಾಂಗ್ರೆಸ್ ಪ್ರಜಾಧ್ವನಿ ಕಾರ್ಯಕ್ರಮದ ಬಗ್ಗೆ ವ್ಯಂಗ್ಯವಾಡಿದ ಹೆಚ್.ಡಿ ಕುಮಾರಸ್ವಾಮಿ, ಕುಮಾರಸ್ವಾಮಿ ಭಜನೆ ಮಾಡೋದೇ ಕಾಂಗ್ರೆಸ್ ಧ್ವನಿಯಾಗಿದೆ. ಸಮಾವೇಶಕ್ಕಾಗಿ ಕಾಂಗ್ರೆಸ್ ನಾಯಕರ ದಂಡೇ ಹೋಗುತ್ತಿದೆ. ಆದರೇ ನಾನು ಏಕಾಂಗಿಯಾಗಿ ಕಾರ್ಯಕರ್ತರ ಜೊತೆ ಹೊರಟಿದ್ದೇನೆ. ಪದೇ ಪದೇ ಜನರ ದಿಕ್ಕು ತಪ್ಪಿಸಬಹುದು ಅಂತಾ ತಿಳಿದಿದ್ದಾರೆ. ಮೂರ್ನಾಲ್ಕು ಜಿಲ್ಲೆಗಳಲ್ಲಿ ಮಾತ್ರ ಶಕ್ತಿ ಇತ್ತು. ಈಗ ರಾಜ್ಯಾದ್ಯಂತ ಶಕ್ತಿ ಇದೆ ಎಂದರು.

ನಾನು ಜೆಡೆಸ್ ಪಕ್ಷ ವಿಸರ್ಜನೆ  ಮಾಡುತ್ತೇನೆ ಎಂದು ಹೇಳಿಲ್ಲ ಕಾಂಗ್ರೆಸ್ ನವರು ಸುಳ್ಳು ಹೇಳುತ್ತಿದ್ದಾರೆ. ಪಂಚರತ್ನ ಯೋಜನೆ ಜಾರಿ ಮಾಡದಿದ್ದರೇ ವಿಸರ್ಜಿಸುತ್ತೇನೆ ಎಂದಿದ್ದೇನೆ   ಜೆಡಿಎಸ್ ಬಗ್ಗೆ ಮಾತನಾಡದೇ ಇದ್ದರೇ ನಿಮಗೆ ತಿಂದ ಅನ್ನ ಜೀರ್ಣವಾಗುವುದಿಲ್ಲವಾ..? ಎಂದು ಹೆಚ್.ಡಿ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.

Key words: I am –not- saying – dissolve – JDS-HD Kumaraswamy