Saturday, August 22, 2026

BDA Apartments

Home Front Page ವಿದೇಶದಿಂದ ಪ್ರಜ್ವಲ್ ರೇವಣ್ಣ ಕರೆಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ.

ವಿದೇಶದಿಂದ ಪ್ರಜ್ವಲ್ ರೇವಣ್ಣ ಕರೆಸುವಂತೆ ಪ್ರಧಾನಿ ಮೋದಿಗೆ ಸಿಎಂ ಸಿದ್ದರಾಮಯ್ಯ ಪತ್ರ.

ಬೆಂಗಳೂರು,ಮೇ,1,2024 (www.justkannada.in): ಪ್ರಜ್ವಲ್ ರೇವಣ್ಣ ವಿರುದ್ದ ಲೈಂಗಿಕ ದೌರ್ಜನ್ಯ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಿಎಂ ಸಿದ್ದರಾಮಯ್ಯ ಪತ್ರ ಬರೆದಿದ್ದಾರೆ.

ಈ ಕುರಿತು ಪ್ರಧಾನಿ ಮೋದಿಗೆ ಪತ್ರ ಬರೆದಿರುವ ಸಿಎಂ ಸಿದ್ದರಾಮಯ್ಯ,  ಪ್ರಜ್ವಲ್ ರೇವಣ್ಣನನ್ನ ವಿದೇಶದಿಂದ ಕರೆಸಬೇಕು. ಪಾಸ್ ಪೋರ್ಟ್ ಮುಟ್ಟುಗೋಲು ಹಾಕಿಕೊಳ್ಳುವಂತೆ ಆಗ್ರಹಿಸಿದ್ದಾರೆ.

ವಿದೇಶಾಂಗ ಇಲಾಖೆ, ಗೃಹ ಇಲಾಖೆ ಮೂಲಕ  ಕ್ರಮಕ್ಕೆ ಆಗ್ರಹಿಸಿರುವ ಸಿಎಂ ಸಿದ್ದರಾಮಯ್ಯ,  ಇಂಟರ್ ಪೋಲ್ ನೆರವು ಪಡೆಯುವಂತೆಯೂ ಮನವಿ ಮಾಡಿದ್ದಾರೆ.   ವಿದೇಶದಿಂದ ಪ್ರಜ್ವಲ್ ಕರೆಸುವುದೇ ನಮ್ಮ ಆದ್ಯತೆ . ವಿದೇಶಾಂಗ ಇಲಾಖೆಗೆ ಎಸ್ ಐಟಿ ಮಾಹಿತಿ ಒದಗಿಸಲಿದೆ.  ಕಾನೂನಾತ್ಮಕವಾಗಿ ಸಹಕಾರ ನೀಡಲು ಸಿದ್ದರಿದ್ದೇವೆ.   ವಿದೇಶಾಂಗ ಸಚಿವಾಲಯದಿಂದ ಕೂಡಲೇ ಕ್ರಮ ಕೈಗೊಳ್ಳಲು ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Key words: CM Siddaramaiah, letter, PM Modi, Prajwal Revanna