ಮೋದಿಯದ್ದು ಬರೀ ಬುರುಡೆ ಭಾಷಣ: ಸರ್ಪ ಯಾವಾಗಲೂ ಡೇಂಜರ್ ಎಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ.

ಬಾಗಲಕೋಟೆ,ಮೇ,1,2023(www.justkannada.in):  ಜನರ ಒಳಿತಿಗಾಗಿ ನಾನು ಸರ್ಪ ಆಗಲು ಸಿದ್ಧ ಎಂದ ಪ್ರಧಾನಿ ಮೋದಿ ಹೇಳಿಕೆ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ , ಸರ್ಪ ಯಾವಾಗಲೂ ಡೇಂಜರ್ ಎಂದಿದ್ದಾರೆ.

ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಹೆಚ್.ಡಿ ಕುಮಾರಸ್ವಾಮಿ, ಸರ್ಪ ವಿಷಕನ್ಯೆ  ಬಗ್ಗೆ ಚರ್ಚೆ ಮಾಡುವುದಕ್ಕೆ ನಾನು ಹೋಗಲ್ಲ. ಇವತ್ತಿನ ರಾಜಕಾರಣದಲ್ಲಿ ಇವೆಲ್ಲಾ ಅವಶ್ಯಕತೆ ಇಲ್ಲ. ಮೋದಿ ಇಲ್ಲಿಗೆ ಬಂದು ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಾರೆ. ಮೋದಿ ಬರೀ ಬುರುಡೆ ಭಾಷಣ ಮಾಡಿ ಹೋಗುತ್ತಾರೆ. ಈ ಡಬಲ್ ಇಂಜಿನ್ ಸರ್ಕಾರವೇ ಲೂಟಿ ಹೊಡೆಯೋದು ಎಂದು ವಾಗ್ದಾಳಿ ನಡೆಸಿದರು.

ಮೋದಿ  ಭಾಷಣ ಎಲ್ಲಾ ಸಂತೆ ಭಾಷಣ. ಯಾವುದೂ ಜಾರಿಗೆ ತರಲು ಗೊತ್ತಿಲ್ಲ. ಬರೀ ಬುರುಡೆ ಭಾಷಣ ಮಾಡಿ ಹೋಗುತ್ತಾರೆ.ಬಿಜೆಪಿ ಮತ್ತು ಕಾಂಗ್ರೆಸ್ ರಾಷ್ಟ್ರ ನಾಯಕರೆಲ್ಲಾ  9ನೇ ತಾರೀಕಿನವರೆಗೂ ಇರುತ್ತಾರೆ. ಆ ಮೇಲೆ ಕರ್ನಾಟಕದಲ್ಲಿ ಏನಾಗಿದೆ ಎಂದು ಕೇಳಲು ಬರುತ್ತಾರಾ? ಚುನಾವಣೆ ಮುಗಿದ ಮೇಲೆ ಕರ್ನಾಟಕಕ್ಕೆ ಟಾಟಾ ಮಾಡಿ ಹೋಗುತ್ತಾರೆ ಎಂದು ವ್ಯಂಗ್ಯವಾಡಿದರು.

Key words: Modi- speech-Former CM -HD Kumaraswamy – snake – danger.