ಮತದಾನ ಮಾಡಿ ಹೊರಬಂದ ಬಳಿಕ ವ್ಯಕ್ತಿ ಸಾವು:  ಮತ ಚಲಾಯಿಸಲು ಬಂದಿದ್ದ ವೇಳೆಯೇ ಮೃತಪಟ್ಟ ವೃದ್ಧೆ..

0
1

ಹಾಸನ/ಬೆಳಗಾವಿ,ಮೇ,10,2023(www.justkannada.in):  ಮತದಾನ ಮಾಡಿ ಹೊರ ಬಂದ‌ ಬಳಿಕ ವ್ಯಕ್ತಿ ಸಾವನ್ನಪ್ಪಿರುವ ಘಟನೆ ಜಿಲ್ಲೆ ಬೇಲೂರು ತಾಲೂಕಿನ ಚಿಕ್ಕೋಲೆ ಗ್ರಾಮದಲ್ಲಿ ನಡೆದಿದೆ.

ಚಿಕ್ಕೋಲೆ ಗ್ರಾಮದ ಜಯಣ್ಣ(49) ಮೃತಪಟ್ಟ ವ್ಯಕ್ತಿ. ಚಿಕ್ಕೋಲೆ ಗ್ರಾಮದಲ್ಲಿ ಮತ ಚಲಾಯಿಸಿ ಹೊರಗೆ ಬಂದ ಬಳಿಕ ಜಯಣ್ಣಗೆ ಹೃದಯಾಘಾತವಾಗಿದ್ದು ಮತಗಟ್ಟೆ ಆವರಣದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.

ಇನ್ನೊಂದೆಡೆ ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರ ವ್ಯಾಪ್ತಿಯ ಯರಝರ್ವಿಯಲ್ಲಿ ಮತಚಲಾಯಿಸಲು ಹೋಗಿದ್ದ ವೇಳೆಯೇ ವೃದ್ದೆ ಮೃತಪಟ್ಟಿದ್ದಾರೆ. ಯರಝರ್ವಿ ಗ್ರಾಮದ  70 ವರ್ಷದ ಪಾರವ್ವ ಸಿದ್ನಾಳ ಮತದಾನಕ್ಕೂ ಮುನ್ನ ಮತಗಟ್ಟೆ ಆವರಣದಲ್ಲಿ ಲೋ ಬಿಪಿಯಿಂದ ಕುಸಿದು ಬಿದ್ದು ನಿಧನರಾಗಿದ್ದಾರೆ. ಸವದತ್ತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟ‌ನೆ ನಡೆದಿದೆ.

Key words:  Assembly-election- person- died –after-voting.