ತುಳು ಭಾಷೆಗೆ ಅಧಿಕೃತ ಸ್ಥಾನ ಮಾನ: ದನಿಗೂಡಿಸಿದ ಹ್ಯಾಟ್ರಿಕ್ ಹೀರೋ

ಬೆಂಗಳೂರು, 10, 2019 (www.justkannada.in): ತುಳು ಭಾಷಿಕರ ಬಹುಕಾಲದ ಬೇಡಿಕೆಗೆ ಈಡೇರಿಕೆಗೆ ನಟ ಶಿವರಾಜ್ ಕುಮಾರ್ ದನಿಗೂಡಿಸಿದ್ದಾರೆ.

ತುಳು ಭಾಷೆಗೆ ಅಧಿಕೃತ ಸ್ಥಾನ ಮಾನ ನೀಡಬೇಕೆಂಬುದು ತುಳು ಭಾಷಿಕರ ಬಹುದಿನಗಳ ಬೇಡಿಕೆಯಾಗಿದೆ. ಈ ಬೇಡಿಕೆಗೆ ಈಗ ಶಿವರಾಜ್ ಕುಮಾರ್ ಧ್ವನಿಗೂಡಿಸಿದ್ದಾರೆ.

ತಮ್ಮ ಸೋಷಿಯಲ್ ಮೀಡಿಯಾದಲ್ಲಿ ವಿಡಿಯೋ ಸಂದೇಶ ಪ್ರಕಟಿಸಿರುವ ಶಿವಣ್ಣ ತುಳುಭಾಷೆಗೆ ಅಧಿಕೃತ ಸ್ಥಾನ ಮಾನ ನೀಡುವುದಕ್ಕೆ ನನ್ನ ಬೆಂಬಲವಿದೆ. ತುಳುವರ ಈ ಬೇಡಿಕೆ ಶೀಘ್ರದಲ್ಲೇ ನೆರವೇರಲಿ ಎಂದು ಆಶಿಸಿದ್ದಾರೆ.