ಉಪ್ಪಿಗೆ ‘ಸೆಟ್ಟಾಗದ’ ಡೈರೆಕ್ಷರ್ ! ಬುದ್ಧಿವಂತ-2’ನಿಂದ ಹೊರಬಂದ ನವ ನಿರ್ದೇಶಕ

ಬೆಂಗಳೂರು, 10, 2019 (www.justkannada.in): ಉಪೇಂದ್ರ ಅಭಿನಯದ ಬುದ್ಧಿವಂತ 2 ಚಿತ್ರದ ನಿರ್ದೇಶಕ ಮೌರ್ಯ ಚಿತ್ರದಿಂದ ಹೊರಬಂದಿದ್ದಾರೆ.

20 ದಿನಗಳ ಹಿಂದಷ್ಟೇ ಚಿತ್ರದ ಚಿತ್ರೀಕರಣ ಭರದಿಂದ ಸಾಗಿತ್ತು. ಇದೀಗ ನಿರ್ದೇಶಕರು ಚಿತ್ರದಿಂದ ಹೊರಬಂದಿದ್ದಾರೆ. ನಟ ಉಪೇಂದ್ರ ಮತ್ತು ನಿರ್ದೇಶಕ ನಡುವೆ ಸೃಜನಶೀಲ ವ್ಯತ್ಯಾಸಗಳಿಂದ ನಿರ್ದೇಶಕರು ನಿರ್ದೇಶನದಿಂದ ಹೊರ ಬಂದಿದ್ದಾರೆ ಎನ್ನಲಾಗಿದೆ.

ಕ್ರಿಸ್ಟಲ್ ಪಾರ್ಕ್ ಸಿನಿಮಾಸ್ ಪ್ರೊಡೆಕ್ಷನ್ ಹೌಸ್ ಮೂಲಕ ಚಿತ್ರವನ್ನು ನಿರ್ಮಾಣ ಮಾಡಲಾಗುತ್ತಿತ್ತು. ಇದೀಗ ಚಿತ್ರದ ನಿರ್ದೇಶನಕ್ಕೆ ನವ ನಿರ್ದೇಶಕ ಜಯರಾಮ್ ಮುಂದಾಗಿದ್ದಾರೆ.