ಮೈಸೂರು ದಸರಾ ಆನೆಗಳ ಮಾವುತರು ಮತ್ತು ಕಾವಾಡಿ ಕುಟುಂಬಗಳಿಗೆ ಉಪಹಾರ ಕೂಟ: ಸಚಿವ ಸಿ.ಟಿ ರವಿ ಸೇರಿ ಹಲವರು ಭಾಗಿ…..

ಮೈಸೂರು,ಸೆ,10,2019(www.justkannada.in): ಮೈಸೂರು ದಸರಾ ಮಹೋತ್ಸವಕ್ಕೆ ದಿನಗಣನೆ ಆರಂಭವಾಗಿದ್ದು ಈ ನಡುವೆ  ಕ್ಯಾಪ್ಟನ್ ಅರ್ಜುನ ನೇತೃತ್ವದ ಗಜಪಡೆ ನಿತ್ಯ ತಾಲೀಮು ನಡೆಸುತ್ತಿವೆ. ಈ ನಡುವೆ ಇಂದು ಆನೆಗಳ ಮಾವುತರು ಕಾವಾಡಿ ಕುಟುಂಬಗಳಿಗೆ ಜಿಲ್ಲಾಡಳಿತದ ವತಿಯಿಂದ ಉಪಹಾರಕೂಟ ಆಯೋಜಿಸಲಾಗಿತ್ತು.

ಆನೆಗಳ ಮಾವುತರು ಮತ್ತು ಕಾವಾಡಿಯ 26  ಕುಟುಂಬಗಳಿಗೆ ಜಿಲ್ಲಾಡಳಿತ ನವನೀತ್ ಕ್ಯಾಟರಿಂಗ್ ನಿಂದ  ಉಪಹಾರ ವ್ಯವಸ್ಥೆ ಮಾಡಿತ್ತು. ಮಾವುತರು ಕಾವಾಡಿ ಕುಟುಂಬದವರು ಇಡ್ಲಿ ಸಾಂಬಾರ್, ಪೊಂಗಲ್ ಮಸಾಲ ವಡೆ ಹಾಗೂ ಉಪ್ಪಿಟ್ಟು  ಸವಿದರು.

ಉಪಹಾರ ಕೂಟದಲ್ಲಿ ಪ್ರವಾಸೋದ್ಯಮ ಸಚಿವ ಸಿಟಿ ರವಿ ಶಾಸಕರಾದ ನಾಗೇಂದ್ರ , ಎಸ್.ಎ ರಾಮದಾಸ್ , ಜಿ.ಪಂ ಅಧ್ಯಕ್ಷೆ ಪರಿಮಳಾ ಶ್ಯಾಂ ಸೇರಿದಂತೆ ಜಿಲ್ಲಾಡಳಿತ ಹಾಗೂ ಅರಮನೆ ಆಡಳಿತ ಮಂಡಳಿ ಅಧಿಕಾರಿಗಳು ಭಾಗಿಯಾಗಿದ್ದರು.  ಇದೇ ವೇಳೆ ಸಚಿವ ಸೋಮಣ್ಣರ ಸೋಮಣ್ಣ ಪ್ರತಿಷ್ಠಾನ ವತಿಯಿಂದ  ತಲಾ  ಐದು ಸಾವಿರ ರೂ ಅಂತೆ 20 ಮಾವುತರಿಗೆ 2 ಲಕ್ಷ ರೂ ಮೊತ್ತದ ಉಡುಗೊರೆ ನೀಡಲಾಯಿತು. ಇದರೊಂದಿಗೆ ಜಿಲ್ಲಾಡಳಿತ ವತಿಯಿಂದಲೂ  ಖಾಕಿ ಸಮವಸ್ತ್ರ, ಕೊಡೆ, ಜರ್ಕಿನ್ ಟೋಪಿ ,ನೀರಿನ ಬಾಟೆಲ್, ಟಾರ್ಚ್ ಲೈಟ್, ಹಾಗೂ ಉತ್ತಮ ದರ್ಜೆ ಶೂ ಗಳನ್ನ ಸಚಿವರು ವಿತರಸಿದರು.

ಕಾರ್ಯಕ್ರಮಕ್ಕೆ ಜಿಲ್ಲಾ  ಉಸ್ತುವಾರಿ ಸಚಿವ ವಿ. ಸೋಮಣ್ಣ   ತಡವಾಗಿ ಆಗಮಿಸಿದ ಹಿನ್ನೆಲೆ  ಸಚಿವ ಸಿ.ಟಿ ರವಿ ಮಾವುತರ ಕುಟುಂಬಸ್ಥರ ಭೇಟಿ ಮಾಡಿ ಕುಶಲೋಪರಿ ವಿಚಾರಿಸಿದರು. ಪ್ರತಿಯೊಬ್ಬ ಮಾವುತರ ಕಾವಾಡಿಗಳ ಹೆಸರು ವಿಳಾಸ ಪರಿಚಯಿಸಿಕೊಂಡರು

ಇಂದು ಮೊಹರಂ ಕೊನೆದಿನ: ಹಿಂದಿ ಭಾಷೆಯಲ್ಲೇ ಈದ್ ಮುಬಾರಕ್  ಹೇಳಿದ  ಶಾಸಕ  ಎಸ್. ಎ ರಾಮದಾಸ್…

ಇಂದು ಮೊಹರಂ ಕೊನೆದಿನ ಹಿನ್ನೆಲೆ, ಮಾವುತರ,  ಕಾವಾಡಿಗಳ ಮಕ್ಕಳಿಗೆ   ಶಾಸಕ ಎಸ್.ಎ ರಾಮದಾಸ್  ಹಿಂದಿಯಲ್ಲೇ ಈದ್ ಮುಬಾರಕ್  ಹೇಳಿದರು.ಅರಮನೆ ಆವರಣದಲ್ಲಿ ಮಾವುತರ,  ಕಾವಾಡಿಗಳ ಕುಟುಂಬಸ್ಥರಿಗೆ ಆಯೋಜಿಸಿದ್ದ ಉಪಹಾರಕೂಟದಲ್ಲಿ ಮಕ್ಕಳನ್ನ ಭೇಟಿ  ಮಾಡಿ  ಮೊಹರಂ ಕೊನೆ ದಿನದ  ಶುಭಕೋರಿದರು.

Key words: Mysore Dasara – breakfast party-Elephants – kavadi- families