Tuesday, September 22, 2026

BDA Apartments

ರೂಪಾಂತರಿ ಕೋವಿಡ್ ತೀವ್ರತೆ ಕುರಿತ ಪ್ರಿಯಾಂಕ ಚೋಪ್ರಾ ಟ್ವೀಟ್ BDA JK_Adv BDA Adv
Home Cinema ರೂಪಾಂತರಿ ಕೋವಿಡ್ ತೀವ್ರತೆ ಕುರಿತ ಪ್ರಿಯಾಂಕ ಚೋಪ್ರಾ ಟ್ವೀಟ್

ರೂಪಾಂತರಿ ಕೋವಿಡ್ ತೀವ್ರತೆ ಕುರಿತ ಪ್ರಿಯಾಂಕ ಚೋಪ್ರಾ ಟ್ವೀಟ್

ಬೆಂಗಳೂರು, ಏಪ್ರಿಲ್ 22, 2021 (www.justkannada.in): ಕೋವಿಡ್ ಸೋಂಕಿನ ತೀವ್ರತೆ ಕುರಿತು ಮಾಜಿ ವಿಶ್ವ ಸುಂದರಿ, ನಟಿ ಪ್ರಿಯಾಂಕ ಚೋಪ್ರಾ ಮಾತನಾಡಿದ್ದಾರೆ.

ಕೋವಿಡ್ ರೂಪಾಂತರಿ ಸೋಂಕು ದೇಶದಲ್ಲಿ ಏರಿಕೆಯಾಗುತ್ತಿರುವುದಕ್ಕೆ ಪ್ರಿಯಾಂಕ ಚೋಪ್ರಾ ಆತಂಕ ವ್ಯಕ್ತ ಪಡಿಸಿದ್ದಾರೆ.

ಕೋವಿಡ್ ಸೋಂಕಿನ ಬಗ್ಗೆ ನಿರ್ಲಕ್ಷ್ಯ ಬೇಡ, ಎಚ್ಚರಿಕೆ ವಹಿಸಿ ಎಂದು ಟ್ವಿಟ್ಟರ್ ನಲ್ಲಿ ಮನವಿ ಮಾಡಿಕೊಂಡಿದ್ದಾರೆ.

ದಯವಿಟ್ಟು ಮನೆಯಲ್ಲೇ ಇರಿ. ಮನೆಯಲ್ಲೇ ಇರಬೇಕೆಂದು ನಿಮ್ಮಲ್ಲಿ ಬೇಡಿಕೊಳ್ಳುತ್ತೇನೆ. ನಿಮಗಾಗಿ, ನಿಮ್ಮ ಕುಟುಂಬ, ಸ್ನೇಹಿತರು, ನಿಮ್ಮ ಸುತ್ತಮುತ್ತಲಿನವರಿಗಾಗಿ ಇದನ್ನು ಪಾಲಿಸಿ ಎಂದು ಪ್ರಿಯಾಂಕ ಕೋರಿದ್ದಾರೆ.