Monday, September 21, 2026

BDA Apartments

ಓಟಿಟಿ ವೇದಿಕೆಯಲ್ಲಿ ಸಲ್ಮಾನ್ ಖಾನ್ ‘ರಾಧೇ’ ರಿಲೀಸ್ BDA JK_Adv BDA Adv
Home Cinema ಓಟಿಟಿ ವೇದಿಕೆಯಲ್ಲಿ ಸಲ್ಮಾನ್ ಖಾನ್ ‘ರಾಧೇ’ ರಿಲೀಸ್

ಓಟಿಟಿ ವೇದಿಕೆಯಲ್ಲಿ ಸಲ್ಮಾನ್ ಖಾನ್ ‘ರಾಧೇ’ ರಿಲೀಸ್

ಬೆಂಗಳೂರು, ಏಪ್ರಿಲ್ 22, 2021 (www.justkannada.in):

ಸಲ್ಮಾನ್ ಖಾನ್ ನಟನೆಯ ‘ರಾಧೇ’ ಸಿನಿಮಾ ರಿಲೀಸ್ ದಿನಾಂಕ ಕೊನೆಗೂ ಫಿಕ್ಸ್ ಆಗಿದೆ.

ಚಿತ್ರಮಂದಿರ ಹಾಗೂ ಓಟಿಟಿ ಎರಡೂ ವೇದಿಕೆಯಲ್ಲಿ ಏಕಕಾಲಕ್ಕೆ ಸಿನಿಮಾ ರಿಲೀಸ್ ಮಾಡಲು ನಿರ್ಮಾಪಕರು ನಿರ್ಧರಿಸಿದ್ದಾರೆ.

ಮೇ 13 ರಂದು ರಾಧೇ ಸಿನಿಮಾ ಚಿತ್ರಮಂದಿರ ಹಾಗೂ ಜೀ ನೆಟ್‌ವರ್ಕ್‌ನಲ್ಲಿ ಪ್ರೀಮಿಯರ್ ಪ್ರದರ್ಶನ ಕಾಣಲಿದೆ ಎಂಬ ಸುದ್ದಿಯನ್ನು ಬಾಲಿವುಡ್ ಹಂಗಾಮ ವರದಿ ಮಾಡಿದೆ.

ಮಹಾರಾಷ್ಟ್ರ ಹಾಗೂ ದೇಶದ ಇತರೆ ರಾಜ್ಯಗಳಲ್ಲಿ ಕೊರೊನಾ ಪರಿಸ್ಥಿತಿ ಕೈ ಮೀರುತ್ತಿರುವುದರಿಂದ ಸದ್ಯ ಚಿತ್ರ ಮಂದಿರಗಳ ಬಾಗಿಲು ತೆರೆಯುವುದು ಅಸಾಧ್ಯ. ಹೀಗಾಗಿ ಚಿತ್ರತಂಡ ಈ ನಿರ್ಧಾರ ಮಾಡಿದೆ ಎನ್ನಲಾಗಿದೆ.