ಮೈಸೂರು ನಗರದಲ್ಲಿ ಕೋವಿಡ್ ಕೇಸ್ ಹೆಚ್ಚಳ ಹಿನ್ನೆಲೆ: ಪಾಲಿಕೆಯಿಂದ ಕಂಟ್ರೋಲ್ ರೂಂ ಓಪನ್…

ಮೈಸೂರು,ಏಪ್ರಿಲ್,22,2021(www.justkannada.in): ಮೈಸೂರು ನಗರದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಹೆಚ್ಚಳವಾದ ಹಿನ್ನೆಲೆಯಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ ಮೈಸುರು ಮಹಾನಗರ ಪಾಲಿಕೆ ಕಂಟ್ರೋಲ್ ರೂಂ ಓಪನ್  ಮಾಡಿದೆ.jk

ವಾಣಿ ವಿಲಾಸ ನೀರು ಸರಬರಾಜು ಆವರಣದಲ್ಲಿರುವ ಸಭಾಂಗಣದಲ್ಲಿ ಸಹಾಯವಾಣಿ ಆರಂಭವಾಗಿದ್ದು, ಕಂಟ್ರೋಲ್ ರೂಂ ಕೋವಿಡ್-19 ಸಂಬಂಧ ಸಾರ್ವಜನಿಕರಿಗೆ ಸಹಕಾರಿಯಾಗಲಿದೆ. ದಿನದ 24 ಗಂಟೆಗಳ ಕಾಲ ಸಹಾಯವಾಣಿ ಕಾರ್ಯನಿರ್ವಹಿಸಲಿದೆ.

ಕೃಷ್ಣರಾಜ (0821 – 2517922), (0821 – 2519222), ಚಾಮರಾಜ (0821 – 2519922), ಚಾಮುಂಡೇಶ್ವರಿ ಕ್ಷೇತ್ರದ ವಾರ್ಡ್ ನಂ 44, 45, 46, 58ರ ನಾಗರೀಕರಿಗೆ (0821 – 2519522), ನರಸಿಂಹರಾಜ (0821 – 2517422), (0821 – 2515522) ಸಂಖ್ಯೆಗಳ ಸಹಾಯವಾಣಿ ಆರಂಭವಾಗಿದೆ.Covid Case -Increase - Mysore City- Control Room -Open – mysore city corporation

ನಾಗರಿಕರಿಗೆ ಕೋವಿಡ್ ಸಂಬಂಧ ಸಹಾಯ ಬೇಕಿದ್ದಲ್ಲಿ ಆಯಾ ಕ್ಷೇತ್ರದ ಸಹಾಯವಾಣಿ ಸಂಖ್ಯೆ ಸಂಪರ್ಕಿಸುವಂತೆ ಪಾಲಿಕೆ ಪ್ರಕಟಣೆ ಹೊರಡಿಸಿದೆ.

Key words: Covid Case -Increase – Mysore City- Control Room -Open – mysore city corporation