ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಫೋನ್ ಇನ್  ಕಾರ್ಯಕ್ರಮ:  ಸಮಸ್ಯೆಗಳಿಗೆ ಪರಿಹಾರ.

ಮೈಸೂರು,ಮಾರ್ಚ್,11,2024(www.justkannada.in): ಮೈಸೂರು ದಕ್ಷಿಣ ವಲಯದ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಹಾಗೂ ಜ್ಞಾನ ಧ್ವನಿ ಸಮುದಾಯ ಬಾನುಲಿ ಕೇಂದ್ರ. ಗೋಪಾಲಸ್ವಾಮಿ ಶಿಕ್ಷಣ ಸಂಸ್ಥೆಗಳ ಇವರ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳು ಹಾಗೂ ಪೋಷಕರಿಗಾಗಿ ಫೋನ್ ಇನ್  ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬೆಳಿಗ್ಗೆ 10:30 ರಿಂದ 12 ಗಂಟೆಯವರೆಗೆ ಸುಮಾರು 47 ವಿದ್ಯಾರ್ಥಿಗಳು ಹಾಗೂ ಪೋಷಕರು ಫೋನ್ ಇನ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿ ಎಸ್ ಎಸ್ ಎಲ್ ಸಿ ಪರೀಕ್ಷೆಯ ಸಮಯ ಹೊಂದಾಣಿಕೆ, ಅನ್ವಯಿಕ ಪ್ರಶ್ನೆಗಳ ಬರೆಯುವ ವಿಧಾನ,  ಇತಿಹಾಸದಲ್ಲಿ ಭಾರತದ ಭೂಪಟವನ್ನು ಬರೆದು  ಪ್ರದೇಶಗಳನ್ನು ಗುರುತಿಸುವುದು ಹೇಗೆ ಎಂಬುದರ ಬಗ್ಗೆ  ಹಾಗೂ ಇತಿಹಾಸ ಪಾಠದಲ್ಲಿ ಇಸವಿಯನ್ನು ನೆನಪು ಮಾಡಿಕೊಳ್ಳುವುದರ ಬಗ್ಗೆ ಹಾಗೂ ಇತರ ಕ್ಲಿಷ್ಟಕರ ಪ್ರಶ್ನೆಗಳಿಗೆ ಪರಿಹಾರವನ್ನು ಕಂಡುಕೊಂಡರು.

ಗಣಿತದಲ್ಲಿ ಪ್ರಮೇಯ ಹಾಗೂ ನಕ್ಷೆಗಳ ಬಗ್ಗೆ ಒಂದು ಅಂಕ ಹಾಗೂ ಎರಡು ಅಂಕಗಳನ್ನು ಉತ್ತರಿಸುವ ಬಗ್ಗೆ,  ವಿಜ್ಞಾನದಲ್ಲಿ ಅನ್ವಯಿಕ ಪ್ರಶ್ನೆಗಳಿಗೆ ಹೇಗೆ ಉತ್ತರಿಸುವುದು ಎನ್ನುವುದರ ಬಗ್ಗೆ ಕನ್ನಡ ಇಂಗ್ಲಿಷ್ ಹಾಗೂ ಹಿಂದಿ ಭಾಷೆಗಳಲ್ಲಿ ಉತ್ತೀರ್ಣರಾಗುವುದು ಹೇಗೆ ಅಕ್ಷರವನ್ನು ಅಂದವಾಗಿ ಬರೆಯುತ್ತಾ ವೇಗವಾಗಿ ಬರೆಯುವುದು ಹೇಗೆ ಎಂಬುದರ ಬಗ್ಗೆ ಅನೇಕ ಪ್ರಶ್ನೆಗಳನ್ನು ವಿದ್ಯಾರ್ಥಿಗಳು ಫೋನ್ ಇನ್  ಕಾರ್ಯಕ್ರಮದ ಮೂಲಕ ನೇರವಾಗಿ  ನುರಿತ ಸಂಪನ್ಮೂಲ ಶಿಕ್ಷಕರಿಗೆ ಕೇಳಿ  ತಮ್ಮ ಸರಳ ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಂಡರು ಬೆಳಿಗ್ಗೆ ವೇಳೆ ಯಾವುದನ್ನು ಓದಬೇಕು? ಸಂಜೆ ವೇಳೆ ಯಾವುದನ್ನು ಓದಬೇಕು ಓದಿದ್ದನ್ನು ಹೇಗೆ ನೆನಪಿನಲ್ಲಿ ಇರಿಸಿಕೊಳ್ಳಬೇಕು.. ಈ ಬಾರಿ ಪ್ರಶ್ನೆಪತ್ರಿಕೆ ಟಫ್ ಆಗಿರುತ್ತೋ ಸುಲಭವಾಗಿರುತ್ತೋ ಎಂದು ಮಕ್ಕಳು ಸಂಪನ್ಮೂಲ ಶಿಕ್ಷಕರಿಗೆ ಪ್ರಶ್ನಿಸಿ ಮಾಹಿತಿ ಪಡೆದರು.

ಫೋನ್ ಇನ್  ಕಾರ್ಯಕ್ರಮದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಸಿ. ಎನ್ ರಾಜು ಕ್ಷೇತ್ರ ಸಂಪನ್ಮೂಲ  ಅಧಿಕಾರಿಗಳಾದ ಶ್ರೀಕಂಠ ಸ್ವಾಮಿ. ಎಸ್ ಎಸ್ ಎಲ್ ಸಿ ನೋಡಲ್ ಅಧಿಕಾರಿಗಳು ಹಾಗೂ ಶಿಕ್ಷಣ ಮತ್ತು ಸಂಯೋಜಿಕರಾದ ಮನೋಹರ್. ಶಿಕ್ಷಣ ಸಂಯೋಜಿಕರಾದ ಕುಮಾರ್. ನುರಿತ ಸಂಪನ್ಮೂಲ ಶಿಕ್ಷಕರಾದ ಬಸವರಾಜ್- ಸಮಾಜ ವಿಜ್ಞಾನ, ಶ್ವೇತಾ ವಿಜ್ಞಾನ, ಅನಿಲ್ ಹಾಗೂ ಪ್ರದೀಪ್- ಗಣಿತ,  ಸಿದ್ದೇಶ್ವರ ಪ್ರಸಾದ್ – ಇಂಗ್ಲೀಷ್,  ಮಧು ಸೋದನ್ –ಕನ್ನಡ,  ಭಾರ್ಗವಿ-ಹಿಂದಿ,  ವಿಷಯ ಸಂಪನ್ಮೂಲ ಶಿಕ್ಷಕರು ಹಾಜರಿದ್ದು ವಿದ್ಯಾರ್ಥಿಗಳ  ಸಮಸ್ಯೆಗಳಿಗೆ ಫೋನ್ ಇನ್ ಮೂಲಕ ಸ್ಪಂದಿಸಿದರು.  ಹಾಗೆಯೇ ಸಂಸ್ಥೆಯ ಮುಖ್ಯ ಶಿಕ್ಷಕರಾದ ಶ್ರೀ ರಾಮ್ ಪ್ರಸಾದ್. ನಾಗರಾಜ್  ಅವರು ಹಾಜರಿದ್ದರು

ಒಟ್ಟಾರೆ ಇದೇ ತಿಂಗಳ 25ರಿಂದ ಪ್ರಾರಂಭವಾಗವ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಮಕ್ಕಳು ಹೇಗೆ ಸಿದ್ದರಾಗಬೇಕು ಪರೀಕ್ಷೆಯನ್ನು ಸಮಯವನ್ನು ಹೇಗೆ ಹೊಂದಾಣಿಕೆ  ಮಾಡಬೇಕು ಹಾಗೂ ಹೇಗೆ ಉತ್ತರಿಸಬೇಕು ಎಂಬುದರ ಬಗ್ಗೆ ಸುದೀರ್ಘವಾಗಿ ಮಕ್ಕಳ ಸಮಸ್ಯೆಗಳಿಗೆ ಪರಿಹಾರವನ್ನು ನೀಡಲಾಯಿತು.

Key words: Phone In Program- SSLC –students-mysore