ನಾಳೆ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ನಟ ಪುನೀತ್ ರಾಜ್ ಕುಮಾರ್ ಗೆ ನಮನ.

 

ಬೆಂಗಳೂರು,ನವೆಂಬರ್,6,2021(www.justkannada.in):  ಕಳೆದ ಒಂದು ವಾರದ ಹಿಂದೆ ಹೃದಯಾಘಾತದಿಂದ ನಿಧನರಾದ ಸ್ಯಾಂಡಲ್ ವುಡ್ ಖ್ಯಾತ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಗೆ ನಾಳೆ  ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಏಕಕಾಲದಲ್ಲಿ ನಮನ ಸಲ್ಲಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ನಾಗೆಂದ್ರ ಪ್ರಸಾದ್ ರಚಿಸಿರುವ ದೀಪಾಂಜಲಿ, ಪುಷ್ಪಾಂಜಲಿ,ಗೀತಾಂಜಲಿ ಮೂಲಕ ನಾಳೆ ಸಂಜೆ 6.ಗಂಟೆಗೆ ರಾಜ್ಯದ 550 ಚಿತ್ರಮಂದಿರಗಳಲ್ಲೂ ಅಪ್ಪುಗೆ ನಮನ ಸಲ್ಲಿಸಲಾಗುತ್ತದೆ.  ಥಿಯೇಟರ್ ಗಳಲ್ಲಿ ನಟ ಪುನೀತ್ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಕ್ಯಾಂಡಲ್ ಹಚ್ಚಿ  ದೀಪಾಂಜಲಿ ಮೂಲಕ ನಮನ ಸಲ್ಲಿಸುವ ಕಾರ್ಯಕ್ರಮ ಆಯೋಜಿಸಲಾಗಿದೆ.

ಅಕ್ಟೋಬರ್ 29 ರಂದು ನಟ ಪುನೀತ್ ರಾಜ್ ಕುಮಾರ್ ಗೆ ವರ್ಕೌಟ್ ಮಾಡುವ ವೇಳೆ ಹೃದಯಾಘಾತವಾಗಿ ವಿಕ್ರಂ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಪುನೀತ್ ರಾಜ್ ಕುಮಾರ್ ಸಾವನ್ನಪ್ಪಿದರು. ಈ ಹಿನ್ನೆಲೆಯಲ್ಲಿ ಇಡೀ ಕನ್ನಡ ಚಿತ್ರರಂಗವೇ ಶೋಕಸಾಗರದಲ್ಲಿ ಮುಳುಗಿತ್ತು.

Key words: Actor -Punith Rajkumar- Shraddhanjali- all theaters – state- tomorrow.

ENGLISH SUMMARY…

Homage to Puneeth Rajkumar in all the cinema halls across the State tomorrow
Bengaluru, November 6, 2021 (www.justkannada.in): The sandalwood has decided to pay homage to the power star the late Puneeth Rajkumar in all the cinema halls in the State tomorrow.
A song ‘Pushpanjali, Geetanjali,’ penned by lyricist Nagendra Prasad will be played, at 6.00 pm in all the 550 cinema halls in the state, as a tribute to the late actor. Floral tributes will be paid to his portrait, along with lighting candles.
Keywords: Power Star/ Puneeth Rajkumar/ homage/ tributes/ cinema halls