47ನೇ ಅಖಿಲ ಭಾರತ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ವಿಜೇತರಾದ ಮೈಸೂರು ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳು.

ಮೈಸೂರು,ಮಾರ್ಚ್,11,2024(www.justkannada.in): ಭಾರತ ಸರ್ಕಾರದ ಗ್ರಾಹಕ ವ್ಯವಹಾರಗಳು, ಆಹಾರ ಮತ್ತು ಸಾರ್ವಜನಿಕ ವಿತರಣಾ ಸಚಿವಾಲಯದ ವ್ಯಾಪ್ತಿಯ ಡಾ.  ಅಂಬೇಡ್ಕರ್ ಸರ್ಕಾರಿ ಕಾನೂನು ಕಾಲೇಜು, ಪುದುಚೇರಿಯಲ್ಲಿ ನಡೆದ ಗ್ರಾಹಕರ ಕಾನೂನಿನ ಕುರಿತಾದ 47ನೇ ಅಖಿಲ ಭಾರತ ಮೂಟ್ ಕೋರ್ಟ್ ಸ್ಪರ್ಧೆಯಲ್ಲಿ ಮೈಸೂರಿನ ಜೆಎಸ್‌ಎಸ್ ಕಾಲೇಜು ವಿದ್ಯಾರ್ಥಿಗಳು ವಿಜೇತರಾಗಿದ್ದಾರೆ.

ತಮಿಳುನಾಡಿನ ಪುದುಚೆರಿಯಲ್ಲಿ ಮಾರ್ಚ್ 8 ರಿಂದ ಮಾ 10ರವರೆಗೆ ಈ ಸ್ಪರ್ಧೆ ನಡೆಸಲಾಯಿತು‌. ಸ್ಪರ್ಧೆಯಲ್ಲಿ ಜೆ ಎಸ್ ಎಸ್ ಕಾಲೇಜಿನ ವಿದ್ಯಾರ್ಥಿಗಳಾದ ಅಮೂಲ್ಯ ಎನ್ ಪ್ರಸಾದ್  8ನೇ ಸೆಮ್ B.A.LLB, ನಿಕಿತಾ ಸುಸಾನ್ ಈಪೆನ್- 8ನೇ ಸೆಮ್ B.A.LLB ಹಾಗೂ ರೋಹನ್ ವಿ ಗಂಗಾಡ್ಕರ್- 6ನೇ ಸೆಮ್ B.A.LLB, ವಿಜೇತರಾಗಿದ್ದಾರೆ. ಇವರಿಗೆ ರೂ.50,000 ನಗದು ಬಹುಮಾನವನ್ನು ನೀಡಲಾಯಿತು.

ಇನ್ನು ಸ್ಪರ್ಧೆಯಲ್ಲಿ ವಿಜೇತರಾದ ತಂಡದಲ್ಲಿದ್ದ ರೋಹನ್ ವಿ ಗಂಗಡ್ಕರ್ ಅವರು ಅತ್ಯುತ್ತಮ ಸಂಶೋಧಕರಾಗಿ ಆಯ್ಕೆಯಾಗಿದ್ದಾರೆ. ಈ ಗೌರವಕ್ಕೆ ಪಾತ್ರರಾದ ರೋಹನ್ ವಿ ಗಂಗಡ್ಕರ್ ಅವರಿಗೆ ₹5000 ನಗದು ಬಹುಮಾನವನ್ನು ನೀಡಲಾಯಿತು. ರೋಹನ್ ವಿ ಗಂಗಡ್ಕರ್ ಮೈಸೂರಿನ‌ ಹಿರಿಯ ವಕೀಲರು ಹಾಗೂ ಲಾ ಗೈಡ್ ಕನ್ನಡ ಕಾನೂನು ಮಾಸಪತ್ರಿಕೆಯ ಗೌರವ ಸಂಪಾದಕರಾದ ಹೆಚ್ ಎನ್ ವೆಂಕಟೇಶ್ ಅವರ ಪುತ್ರ.

ಈ ಸ್ಪರ್ಧೆಯಲ್ಲಿ ಭಾರತದಾದ್ಯಂತ 55 ತಂಡಗಳು ಭಾಗವಹಿಸಿದ್ದವು. ವಿಜೇತರಿಗೆ ಪುದುಚೆರಿ ಹೈಕೋರ್ಟ್‌ನ ನ್ಯಾಯಾಮೂರ್ತಿಗಳಾದ  ಜಿ.ಆರ್.  ಸ್ವಾಮಿನಾಥನ್ ಹಾಗೂ ನ್ಯಾಯಮೂರ್ತಿ ಸುಂದರ್ ಮೋಹನ್, NALSAR, ಹೈದರಾಬಾದ್‌ ನ ಉಪ ಕುಲಪತಿ, ಪ್ರೊ. ಶ್ರೀಕೃಷ್ಣ ದೇವರಾವ್ ಬಹುಮಾನ ವಿತರಿಸಿದರು.

ವಿಜೇತರಿಗೆ ಜೆ ಎಸ್ ಎಸ್ ಕಾನೂನು ಕಾಲೇಜಿನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಪ್ರೊ ಕೆ ಎಸ್ ಸುರೇಶ್, ಪ್ರಾಂಶುಪಾಲರು ಉಪನ್ಯಾಕರು ಸಿಬ್ಬಂದಿ ವರ್ಗದವರು ಹಾಗೂ ಮಾಜಿ ಸಚಿವರು ಹಾಗೂ ಅರಕಲಗೂಡು ಹಾಲಿ ಶಾಸಕರಾದ ಎ ಮಂಜು , ಹಿರಿಯ ವಕೀಲರಾದ ಎಂ ಡಿ ಹರೀಶ್ ಕುಮಾರ್ ಹೆಗ್ಡೆ ಅಭಿನಂದಿಸಿದ್ದಾರೆ.

ENGLISH SUMMARY…

Dr. Ambedkar Government Law College, Puducherry under the aegis of Ministry Of Consumer Affairs, Food and Public Distribution, Government of India had organized 47th All India Moot Court Competition on Consumer Law from 8th to 10th March 2024 wherein-

1. Amoolya N Prasad- VIII Sem B.A.LLB
2. Nikita Susan Eapen- VIII Sem B.A.LLB
3. Rohan V Gangadkar- VI Sem B.A.LLB

Were adjudged the WINNERS receiving a cash prize of Rs.50,000 and

Rohan V Gangadkar was declared the Best Researcher receiving a cash prize of Rs.5000

55 teams all over India had participated and the winners were facilitated by Hon’ble Mr. Justice G.R. Swaminathan,
Hon’ble Mr. Justice Sunder Mohan, Prof. Srikrishna Deva Rao(Vice- Chancellor, NALSAR, Hyderabad)

Key words: Mysore -JSS –College- students – 47th -All India Moot Court -Competition.