Monday, September 21, 2026

BDA Apartments

ಮೋದಿನೂ ಇಲ್ಲ ಯಾರೂ ಇಲ್ಲ, ನಾನು ಸಿಂಗಲ್ ಆರ್ಮಿ, ನಾನೇ ಮೋದಿ, ನಾನೇ ಟ್ರಂಪ್- ಬಿಜ...
Home Front Page ಮೋದಿನೂ ಇಲ್ಲ ಯಾರೂ ಇಲ್ಲ, ನಾನು ಸಿಂಗಲ್ ಆರ್ಮಿ, ನಾನೇ ಮೋದಿ, ನಾನೇ ಟ್ರಂಪ್- ಬಿಜೆಪಿ...

ಮೋದಿನೂ ಇಲ್ಲ ಯಾರೂ ಇಲ್ಲ, ನಾನು ಸಿಂಗಲ್ ಆರ್ಮಿ, ನಾನೇ ಮೋದಿ, ನಾನೇ ಟ್ರಂಪ್- ಬಿಜೆಪಿ ಶಾಸಕನ ಆಡಿಯೋ ವೈರಲ್.

ರಾಯಚೂರು,ಮಾರ್ಚ್,31,2023(www.justkannada.in):  ಚುನಾವಣೆ ಸಮಯದಲ್ಲೇ ಬಿಜೆಪಿ ಶಾಸಕರೊಬ್ಬರ ಆಡಿಯೋವೊಂದು ವೈರಲ್ ಆಗಿದ್ದು, ಕ್ಷೇತ್ರದಲ್ಲಿ ಬಾರೀ ಸಂಚಲನ ಮೂಡಿಸಿದೆ.

ರಾಯಚೂರು ನಗರ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಅವರದ್ದು ಎನ್ನಲಾದ ಆಡಿಯೋ ವೈರಲ್ ಆಗಿದ್ದು, ಮೋದಿನೂ ಇಲ್ಲ ಯಾರೂ ಇಲ್ಲ, ನಾನೇ ಸಿಂಗಲ್ ಆರ್ಮಿ, ನಾನೇ ಮೋದಿ, ನಾನೇ ಟ್ರಂಪ್ ಎಂದು ಆಡಿಯೋದಲ್ಲಿ ಮಾತನಾಡಿದ್ದಾರೆ.

ಶಿವರಾಜ್ ಪಾಟೀಲ್ ಮಾತನಾಇದ್ದಾರೆ ಎನ್ನಲಾದ ಒಟ್ಟು 3 ನಿಮಿಷ 19 ಸೆಕೆಂಡ್ ಗಳ ಫೋನ್ ಸಂಭಾಷಣೆಯ ಆಡಿಯೋ ಇದಾಗಿದೆ. ಹಾಗಾದರೇ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್  ಮಾತನಾಡಿರುವ ಆಡಿಯೋನಲ್ಲಿ ಏನಿದೆ ಗೊತ್ತೆ..?

ಶಿವರಾಜ್ ಪಾಟೀಲ್  ಮಾತನಾಡಿರುವ ಆಡಿಯೋದಲ್ಲಿ, ಮೋದಿಯಿಲ್ಲ,ಪಾದಿಯಿಲ್ಲ.. ನಾನೊಬ್ಬನೇ ಶಿವರಾಜ್ ಪಾಟೀಲ್.. ಯಾವ ಬದನೆಕಾಯಿ ಮಾತು ನಾನು ಕೇಳಲ್ಲ.. ನಾನೇ ಸಿಂಗಲ್ ಆರ್ಮಿ, ನಾನೇ ಮೋದಿ, ನಾನೇ ಟ್ರಂಪ್  ಎಂದಿದ್ದಾರೆ.ಮೋದಿನೂ ಇಲ್ಲ ಯಾರೂ ಇಲ್ಲ shivaraj patil

ಮೋದಿ ರೈಟ್ ಹ್ಯಾಂಡ್‌ ಗೆ ನಾನು ಕೇಳಲ್ಲ, ನನಗೆ ರೈಟ್ ಇಲ್ಲ, ಲೆಫ್ಟ್ ಇಲ್ಲ. ನನ್ನ ಮುಂದೆ ಹೇಳಿದ್ರೆ ಏನೂ ನಡೆಯಂಗಿಲ್ಲ. ಮೊದಲಿನಿಂದಲೂ ನನ್ನ ಕ್ಷೇತ್ರಕ್ಕೆ ‌ಲೀಡರ್ ಗಳಿಗೆ ಬಾ ಅಂತೀನಾ..? ಎಲೆಕ್ಷನ್ ನಲ್ಲಿ ನಾನು ಸೋತರು ಚಿಂತೆಯಿಲ್ಲ,ಗೆದ್ರು ಚಿಂತೆಯಿಲ್ಲ,ಮಲಗಿದರು ಚಿಂತೆಯಿಲ್ಲ.. ಜಗತ್ತಿನಲ್ಲಿ ಚಿಂತೆಯಿಲ್ಲದ ಪುರುಷ ಅಂದ್ರೆ ಅದು ಶಿವರಾಜ್ ಪಾಟೀಲ್ ಎಂದು ಆಡಿಯೋದಲ್ಲಿ ಹೇಳಿದ್ದಾರೆ ಎನ್ನಲಾಗಿದೆ.

ಹಾಗೆಯೇ ಮುಂದುವರೆದು ಮಾತನಾಡಿರುವ ಶಿವರಾಜ್ ಪಾಟೀಲ್,  ನಾನು ದೇವರು ಇದ್ದಂಗೆ,ಅದಕ್ಕೆ ನಮ್ಮ ಹುಡುಗರಿಗೆ ದಿನಾಲೂ ನನ್ನ ಕಾಲಿಗೆ ನಮಸ್ಕಾರ ಮಾಡ್ರಿ ಅಂತ ಹೇಳ್ತಿನಿ.. ಶಿವರಾಜ್ ಪಾಟೀಲ್ ದೈವ ಬರೆಸಿಕೊಳ್ಳಲ್ಲ..ನಾನೇ ದೈವ ಬರಿತೀನಿ ಎಂದು ಮಾತುಗಳನ್ನಾಡಿದ್ದಾರೆ ಎನ್ನಲಾಗಿದೆ. ಸದ್ಯ ಈ ಆಡಿಯೋ ವೈರಲ್ ಆಗಿದೆ.

Key words: No Modi- single army– BJP MLA-Somashekar patil