Saturday, October 24, 2026

Dasara Wishes

ಜೂ,7ರ ಪದಗ್ರಹಣ ಕಾರ್ಯಕ್ರಮ ಮುಂದೂಡಿಕೆ: ಕೇಂದ್ರ, ರಾಜ್ಯ ಸರ್ಕಾರದ ವಿರುದ್ದ ಆಕ...
Happy Dasara
Home Crime ಮಂಗಳೂರಿನಲ್ಲಿ ಮೈಸೂರು ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ.

ಮಂಗಳೂರಿನಲ್ಲಿ ಮೈಸೂರು ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ.

ಮಂಗಳೂರು,ಮಾರ್ಚ್,31,2023(www.justkannada.in):  ಮಂಗಳೂರಿನಲ್ಲಿ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಕೆ.ಎಸ್ ರಾವ್ ರೋಡ್ ಬಳಿಯ ಲಾಡ್ಜ್ ನಲ್ಲಿ ಈ ಘಟನೆ ನಡೆದಿದೆ.  ಮೈಸೂರು ಮೂಲದ ದೇವೇಂದ್ರಪ್ಪ, ಪತ್ನಿ ನಿರ್ಮಲಾ, ಮಕ್ಕಳಾದ ಚೈತ್ರ, ಚೈತನ್ಯ ಆತ್ಮಹತ್ಯೆಗೆ ಶರಣಾದವರು. ದೇವೇಂದ್ರಪ್ಪ ಮೈಸೂರಿನ ವಾಣಿವಿಲಾಸ ಬಡಾವಣೆಯ ನಿವಾಸಿಯಾಗಿದ್ದು ಪತ್ನಿ ಮಕ್ಕಳ ಜೊತೆ ಮಂಗಳೂರಿಗೆ ತೆರಳಿ ಲಾಡ್ಜ್ ನಲ್ಲಿ ಉಳಿದುಕೊಂಡಿದ್ದರು.ಮಂಗಳೂರಿನಲ್ಲಿ ಮೈಸೂರು ಮೂಲದ ಒಂದೇ ಕುಟುಂಬದ ನಾಲ್ವರು ಆತ್ಮಹತ್ಯೆ succide

ಈ ನಡುವೆ ಹೆಂಡತಿ ಮತ್ತು ಮಕ್ಕಳಿಗೆ ವಿಷವುಣಿಸಿ ನಂತರ ತಾನೂ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಡೆತ್ ನೋಟ್ ಬರೆದಿಟ್ಟಿದ್ದು , ಸಾಲಗಾರರ ಒತ್ತಡ ತಡೆಯಲಾರದೆ ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ಹೇಳಲಾಗುತ್ತಿದೆ.

ಸ್ಥಳಕ್ಕೆ ಮಂಗಳೂರು ನಗರ ಪೊಲೀಸ್ ಆಯುಕ್ತ ಕುಲದೀಪ್ ಜೈನ್ ಭೇಟಿ ನೀಡಿದ್ದು ಪರಿಶೀಲನೆ ನಡೆಸಿದ್ದಾರೆ.

Key words:  Four members – same family – Mysore- committed -suicide – Mangalore.