Monday, September 21, 2026

BDA Apartments

ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಸಂಚಾರ ಮತ್ತಷ್ಟು ದುಬಾರಿ: ನಾಳ...
Home Front Page ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಸಂಚಾರ ಮತ್ತಷ್ಟು ದುಬಾರಿ: ನಾಳೆಯಿಂದ ಶೇ. 22ರಷ್ಟು ಟೋಲ್ ದರ...

ಮೈಸೂರು-ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಸಂಚಾರ ಮತ್ತಷ್ಟು ದುಬಾರಿ: ನಾಳೆಯಿಂದ ಶೇ. 22ರಷ್ಟು ಟೋಲ್ ದರ ಹೆಚ್ಚಳ.

ಬೆಂಗಳೂರು,ಮಾರ್ಚ್,31,2023(www.justkannada.in):  ಇತ್ತೀಚೆಗಷ್ಟೇ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಯಾದ ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಸಂಚಾರ ಇದೀಗ ಮತ್ತಷ್ಟು ದುಬಾರಿಯಾಗಲಿದೆ.

ಮೈಸೂರು-ಬೆಂಗಳೂರು ದಶಪಥ ಹೆದ್ದಾರಿಯಲ್ಲಿ ಸಂಚಾರಕ್ಕೆ ನಾಳೇಯಿಂದ ಶೇ.22 ರಷ್ಟು ಟೋಲ್ ದರ ಹೆಚ್ಚಳವಾಗಲಿದೆ. ಟೋಲ್ ದರ ಹೆಚ್ಚಿಸಿ NHAI ಆದೇಶ ಹೊರಡಿಸಿದೆ.ಮೈಸೂರು highway

ಕಾರು ಜೀಪ್ ಏಕಮುಖ ಸಂಚಾರಕ್ಕೆ 30 ರೂ ಹೆಚ್ಚಳವಾದರೇ  ಲಘುವಾಹನಗಳ ಏಕಮುಖ ಸಂಚಾರಕ್ಕೆ 50 ರೂ. ಟ್ರಕ್ ಮತ್ತು  ಬಸ್ ಗಳ  ಏಕಮುಖ ಸಂಚಾರಕ್ಕೆ 165 ರೂ. ಹೆಚ್ಚಳವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.ಬೆಂಗಳೂರು ಎಕ್ಸ್ ಪ್ರೆಸ್ ಹೈವೇಯಲ್ಲಿ ಸಂಚಾರ ಮತ್ತಷ್ಟು ದುಬಾರಿ toll123

Key words: Mysore-Bangalore -Express -Highway – increase – toll fee.