ಪಾಕ್ ಪರ ಘೋಷಣೆ ಕೂಗಿದ್ರೂ ದೇಶದ್ರೋಹಿಗಳ ವಿರುದ್ದ ಕ್ರಮ ಯಾಕಿಲ್ಲ- ಬಿವೈ ವಿಜಯೇಂದ್ರ ಕಿಡಿ.

ಶಿವಮೊಗ್ಗ, ಫೆಬ್ರವರಿ,28,2024(www.justkannada.in):  ವಿಧಾನಸೌಧದಲ್ಲಿ ಪಾಕ್ ಪರ ಘೋಷಣೆ ಕೂಗಿದರೂ ದೇಶದ್ರೋಹಿಗಳ ವಿರುದ್ದ ಯಾಕೆ ಕ್ರಮ ಕೈಗೊಂಡಿಲ್ಲ ಎಂದು ಸರ್ಕಾರಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಪ್ರಶ್ನಿಸಿದ್ದಾರೆ.

ಈ ಕುರಿತು ಇಂದು ಮಾತನಾಡಿದ ಬಿವೈ ವಿಜಯೇಂದ್ರ, ವಿಧಾನಸೌಧದಲ್ಲೇ ಪಾಕ್ ಪರ ಘೋಷಣೆ ಕೂಗಿದ್ದಾರೆ. ಘೋಷಣೆ ಕೂಗಿದವರನ್ನ ಒದ್ದು ಒಳಗೆ ಹಾಕಬೇಕಿತ್ತು. ಆದರೆ ಪಾಕ್ ಪರ ಘೋಷಣೆ ಕೂಗಿದ್ರೂ ಕ್ರಮ ಕೈಗೊಂಡಿಲ್ಲ.   ದೇಶದ್ರೂಹಿಗಳ ವಿರುದ್ದ ಕ್ರಮವಿಲ್ಲ ಯಾಕೆ..?  ದೇಶದ್ರೋಹಿಗಳ ರಕ್ಷಣೆಗೆ ಸರ್ಕಾರ ನಿಂತಿದೆ. ತಪ್ಪಿತಸ್ಥರನ್ನ ನಿರಪರಾಧಿ ಎನ್ನುತ್ತಿದ್ದಾರೆ. ಗೃಹಮಂತ್ರಿಗಳು ಏನು ನಡೆದೇ ಇಲ್ಲ ಅಂತಾರೆ.  ಇದು ಪ್ರಜಾಪ್ರಭುತ್ವ ವಿರೋಧಿ ನಡವಳಿಕೆ ಎಂದು ಕಿಡಿಕಾರಿದರು.

ರಾಜ್ಯಸಭೆ ಚುನಾವಣೆಯಲ್ಲಿ ಅಡ್ಡಮತದಾನ ಕುರಿತು ಪ್ರಕ್ರಿಯಿಸಿದ ಬಿವೈ ವಿಜಯೇಂದ್ರ,  ಎಸ್ ಟಿ ಸೋಮಶೇಖರ್ ಮತ್ತು ಶಿವರಾಂ ಹೆಬ್ಬಾರ್ ನಡೆಯಿಂದ ಯಾವುದೇ ಆತಂಕವಿಲ್ಲ.  ಹೈಕಮಾಂಡ್ ಜೊತೆ ಚರ್ಚಿಸಿ ಅವರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ವರಿಷ್ಠರು ಸಂಪರ್ಕದಲ್ಲಿದ್ದು ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ತಿಳಿಸಿದರು.

Key words:  No action -against – – shouting -pro-Pak slogans- BY Vijayendra