Monday, September 14, 2026

BDA Apartments

ನಾಳೆ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡುತ್ತೇವೆ- ಜಯಪ್ರಕಾಶ್ ಹೆಗಡ...
Home Front Page ನಾಳೆ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡುತ್ತೇವೆ- ಜಯಪ್ರಕಾಶ್ ಹೆಗಡೆ.

ನಾಳೆ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡುತ್ತೇವೆ- ಜಯಪ್ರಕಾಶ್ ಹೆಗಡೆ.

ಬೆಂಗಳೂರು,ಫೆಬ್ರವರಿ,28,2024(www.justkannada.in):  ಬಹುನಿರೀಕ್ಷಿತ ಜಾತಿ ಜನಗಣತಿ ವರದಿ ಸ್ವೀಕರಿಸಲು ಸಮಯ ಕೊಡಿಬಂದಿದ್ದು, ನಾಳೆ ಸರ್ಕಾರಕ್ಕೆ ಸಲ್ಲಿಕೆಯಾಗಲಿದೆ.

ಈ ಕುರಿತು  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಮಾಧ್ಯಮಗಳ ಜೊತೆ ಮಾತನಾಡಿ ಮಾಹಿತಿ ನೀಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, ಸರ್ಕಾರದ ನಿರ್ದೇಶನದಂತೆ  ಜಾತಿಗಣತಿ ವರದಿ ಸಿದ್ದಪಡಿಸಿದ್ದೇವೆ. ಎಲ್ಲಾ ಪ್ರಿಂಟ್ ಆಗಿದ್ದು ಜಾತಿಗಣತಿ ವರದಿ ಸಿದ್ದವಾಗಿದೆ. ನಾಳೆ ಸರ್ಕಾರಕ್ಕೆ ಜಾತಿಗಣತಿ ವರದಿ ಸಲ್ಲಿಸುತ್ತೇವೆ.  ಜಾತಿ ಗಣತಿ ವರದಿ ಸಲ್ಲಿಕೆಗೆ ನಾಳೆ ಕೊನೇ ದಿನ. ಹೀಗಾಗಿ ಸಿಎಂ ಸಿದ್ದರಾಮಯ್ಯರಿಗೆ ವರದಿ ಸಲ್ಲಿಸಲಾಗುವುದು ಎಂದಿದ್ದಾರೆ.ನಾಳೆ ಸರ್ಕಾರಕ್ಕೆ ಜಾತಿ ಗಣತಿ ವರದಿ ಸಲ್ಲಿಕೆ ಮಾಡುತ್ತೇವೆ jayaprakash

ವರದಿ ಬಿಡುಗಡೆಯಾದ ಬಳಿಕ ಸಾರ್ವಜನಿಕ ಚರ್ಚೆಗೆ ಬಂದರೆ ಉತ್ತಮ. ವರದಿಯಲ್ಲಿ ಏನಿದೆ ಎಂದು ಯಾರಿಗೂ ಗೊತ್ತಿಲ್ಲ.  ವರದಿ ಸಿದ್ದ ಮಾಡಿದ್ದೇವೆ. ನಾವು ವರದಿ ಸಲ್ಲಿಕೆ ಮಾಡಿದ  ಬಳಿಕ ಸಚಿವ ಸಂಪುಟದಲ್ಲಿ ಚರ್ಚೆಯಾಗುತ್ತೆ. ಮುಂದೆ ಏನೇ ಇದ್ದರೂ ರಾಜ್ಯ ಸರ್ಕಾರವೇ ತೀರ್ಮಾನ ಮಾಡುತ್ತದೆ ಎಂದು  ಜಯಪ್ರಕಾಶ್ ಹೆಗಡೆ ತಿಳಿಸಿದರು.

Key words: We – submit – caste census report – government- tomorrow – Jayaprakash Hegde