ರಾಜ್ಯದಲ್ಲಿ ವಿದ್ಯುತ್ ದರ ಇಳಿಕೆ ಮಾಡಿದ ಸರ್ಕಾರ.

ಬೆಂಗಳೂರು, ಫೆಬ್ರವರಿ,28,2024(www.justkannada.in):  ರಾಜ್ಯದ ವಿದ್ಯುತ್ ಬಳಕೆದಾರರಿಗೆ ಸರ್ಕಾರ ಸಿಹಿಸುದ್ದಿ ನೀಡಿದ್ದು, ವಿದ್ಯುತ್ ದರ ಇಳಿಕೆ ಮಾಡಿ ಆದೇಶಿಸಿದೆ.

ಕರ್ನಾಟಕ ವಿದ್ಯುಚ್ಛಕ್ತಿ ನಿಯಂತ್ರಣ ಆಯೋಗವು  ಹೊಸ ದರ ಪರಿಷ್ಕರಣೆ ಮಾಡಿದ್ದು,  ವಿದ್ಯುತ್ ದರ ಇಳಿಕೆ  ಮಾಡಿ ಇಂದು ಆದೇಶ ಹೊರಡಿಸಿದೆ. 100 ಯೂನಿಟ್​ ಗಿಂತ ಹೆಚ್ಚು ಬಳಸುವವರಿಗೆ ಪ್ರತಿ ಯೂನಿಟ್ ಮೇಲೆ 1 ರೂಪಾಯಿ 10 ಪೈಸೆ ಇಳಿಕೆ ಮಾಡಲಾಗಿದೆ. ಅದೇ ರೀತಿಯಾಗಿ ವಾಣಿಜ್ಯ ಬಳಕೆದಾರರಿಗೆ 1 ರೂಪಾಯಿ 25 ಪೈಸೆ ದರ ಇಳಿಕೆ ಮಾಡಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಹಾಗೆಯೇ ಆಸ್ಪತ್ರೆ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಯೂನಿಟ್ ಗೆ 40 ಪೈಸೆ ಕಡಿತ ಮಾಡಲಾಗಿದ್ದು ಖಾಸಗಿ ಏತ ನೀರಾವರಿ ಬಳಕೆದಾರರಿಗೆ 2 ರೂಪಾಯಿ ಇಳಿಕೆ ಮಾಡಲಾಗಿದೆ. 100 ಯೂನಿಟ್​ಗಿಂತ ಹೆಚ್ಚು ಬಳಸುವವರಿಗೆ ಮಾತ್ರ ಹೊಸ ದರ ಮಾರ್ಚ್​1 ರಿಂದಲೇ ಅನ್ವಯವಾಗಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

Key words: government – reduced- electricity -rates – state.