50 ದಿನ ಪೂರೈಸಿದ ಪೊಗರು ಗಳಿಕೆ ಎಷ್ಟು ಗೊತ್ತಾ?

ಬೆಂಗಳೂರು, ಏಪ್ರಿಲ್ 09, 2021 (www.justkannada.in):ಧ್ರುವ ಸರ್ಜಾ ನಟನೆಯ ಪೊಗರು ಚಿತ್ರ ಬಿಡುಗಡೆಯಾಗಿ 50 ಕೋಟಿಗೂ ಹೆಚ್ಚು ಕಲೆಕ್ಷನ್ ಮಾಡಿದೆ ಎಂಬ ಸುದ್ದಿ ಹೊರಬಿದ್ದಿದೆ.

ಮೊದಲ ಮೂರು ದಿನಕ್ಕೆ ಈ ಚಿತ್ರ 30 ಕೋಟಿ ರೂ. ಕಲೆಕ್ಷನ್​ ಮಾಡಿತು. 6 ದಿನಗಳಲ್ಲಿ 46 ಕೋಟಿ ರೂ. ಗಳಿಸಿರುವ ಬಗ್ಗೆ ಮಾಹಿತಿ ಕೇಳಿಬಂದಿತ್ತು. ಇದೀಗ ಒಟ್ಟಾರೆಯಾಗಿ 50 ಕೋಟಿಗೂ ಹೆಚ್ಚು ಗಳಿಕೆ ಮಾಡಿದೆ ಎನ್ನಲಾಗಿದೆ.

ಅದ್ದೂರಿಯಾಗಿ ಫೆ.19ರಂದು ಈ ಸಿನಿಮಾ ಬಿಡುಗಡೆ ಆಗಿತ್ತು. ಅಂದಹಾಗೆ ಕೊರೊನಾ ಲಾಕ್​ಡೌನ್​ ಸಡಿಲಿಕೆ ನಂತರ ಸ್ಯಾಂಡಲ್​ವುಡ್​ನಲ್ಲಿ ಬಿಡುಗಡೆಯಾದ ಮೊದಲ ದೊಡ್ಡ ಸಿನಿಮಾ ಪೊಗರು.