ಅಮೆಜಾನ್ ಪ್ರೈಂನಲ್ಲಿ ಯುವರತ್ನ ಬಿಡುಗಡೆಗೆ ಕಾರಣ ತಿಳಿಸಿದ ಅಪ್ಪು

ಬೆಂಗಳೂರು, ಏಪ್ರಿಲ್ 09, 2021 (www.justkannada.in): 

ಒಟಿಟಿಯಲ್ಲಿ ಯುವರತ್ನ ಬಿಡುಗಡೆ ಕುರಿದಂತೆ ಪುನೀತ್ ರಾಜಕುಮಾರ್ ಸ್ಪಷ್ಟನೆ ನೀಡಿದ್ದಾರೆ.

ಬಿಡುಗಡೆಯಾದ ಒಂದೇ ವಾರಕ್ಕೆ ಯುವರತ್ನ ಅಮೆಝೋನ್ ಪ್ರೈಮ್ ನಲ್ಲಿ ರಿಲೀಸ್ ಆಗಿದೆ. ಇದು ಅಭಿಮಾನಿಗಳಿಗೆ ಇಷ್ಟವಾಗಿಲ್ಲ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆಯಾಗುತ್ತಿತ್ತು. ಹೀಗಾಗಿ ಅಪ್ಪು ಸ್ಪಷ್ಟನೆ ನೀಡಿದ್ದಾರೆ.

ವ್ಯಾಪಾರದ ದೃಷ್ಟಿಯಿಂದ ಕೆಲವೊಂದು ಹೊಸ ನಿರ್ಧಾರ ತೆಗೆದುಕೊಳ್ಳಲೇಬೇಕಾಗಿದೆ ಎಂದು ಪುನೀತ್ ಹೇಳಿದ್ದಾರೆ. ಸದ್ಯಕ್ಕೆ ಶೇ.50 ಪ್ರೇಕ್ಷಕರಿಗೆ ಮಾತ್ರ ಅವಕಾಶವಿರುವುದರಿಂದ ಚಿತ್ರಕ್ಕೆ ಹೂಡಿದ ಬಂಡವಾಳ ವಾಪಸ್ ಬರುವುದು ಕಷ್ಟ. ಹೀಗಾಗಿ ಅಮೆಜಾನ್ ಪ್ರೈಂನಲ್ಲಿ ಚಿತ್ರ ಬಿಡುಗಡೆ ಮಾಡಿರುವುದಾಗಿ ತಿಳಿಸಿದ್ದಾರೆ.