ಕೊರೋನಾ ಹೆಚ್ಚಳ ಹಿನ್ನೆಲೆ: ಮೈಸೂರಿನಲ್ಲಿ 530ಕ್ಕೂ ಹೆಚ್ಚು ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ರೆಡಿ…

ಮೈಸೂರು,ಜು,11,2020(www.justkannada.in): ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ದಿನೇ ದಿನೇ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಳವಾಗುತ್ತಿದ್ದು ಈ ಹಿನ್ನೆಲೆ ಸೋಂಕಿತರಿಗೆ ಚಿಕಿತ್ಸೆ ನೀಡಲು ಇದೀಗ 530ಕ್ಕೂ ಹೆಚ್ಚು ಬೆಡ್ ಗಳ ಕೋವಿಡ್ ಕೇರ್ ಸೆಂಟರ್ ಸಜ್ಜಾಗಿದೆ.corona-increase-kovid-care-center-ready-530-beds-mysore

ಮೈಸೂರಿನ ಹೊರವಲಯದ ಮಂಡಕಳ್ಳಿಯಲ್ಲಿರುವ ಕೆಎಸ್ಒಯು ಅಕಾಡೆಮಿಕ್ ಭವನದ ನೂತನ ಕಟ್ಟಡವನ್ನ ಇದೀಗ ಕೋವಿಡ್ ಕೇರ್ ಸೆಂಟರ್ ಆಗಿ ಪರಿವರ್ತಿಸಲಾಗಿದೆ. ಕೋವಿಡ್ ಚಿಕಿತ್ಸೆಗಾಗಿ 4ಅಂತಸ್ತಿನ ಕೆಎಸ್ಒಯು ಕಟ್ಟಡ ಬಳಕೆ ಮಾಡಿಕೊಳ್ಳಲಾಗುತ್ತಿದ್ದು, ಇಲ್ಲಿ ‘ಎ’ ಸಿಮ್ಟಮೆಟಿಕ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತದೆ.corona-increase-kovid-care-center-ready-530-beds-mysore

ನೂತನ ಕೋವಿಡ್ ಕೇರ್ ಸೆಂಟರ್‌ ಗೆ  ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಎಸ್. ಟಿ.‌ ಸೋಮಶೇಖರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನೂತನ ಕೋವಿಡ್ ಕೇಂದ್ರದ ವ್ಯವಸ್ಥೆಯನ್ನ ಸಚಿವ ಎಸ್.ಟಿ ಸೋಮಶೇಖರ್ ವೀಕ್ಷಿಸಿದರು. ಸಚಿವ ಸೋಮಶೇಖರ್ ಗೆ ಶಾಸಕ ನಾಗೇಂದ್ರ, ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ ಸೇರಿದಂತೆ ಮತ್ತಿತರ ಪ್ರಮುಖರು ಸಾಥ್ ನೀಡಿದರು.

ಕೋವಿಡ್ ಕೇರ್ ಸೆಂಟರ್ ನಲ್ಲಿ ರೋಗಿಗಳಿಗೆ ಸ್ನಾನದ ಮನೆ, ಶೌಚಾಲಯ, ಕಿಚನ್, ಫಾರ್ಮಸಿ ಹಾಗೂ ಇಂಡೋರ್ ಗೇಮ್ ವ್ಯವಸ್ಥೆ ಮಾಡಲಾಗಿದೆ.

Key words: Corona- increase -Kovid Care Center -Ready – 530 Beds – Mysore.