ನಾವು 6 ಸ್ಥಾನ ಗೆದ್ದರೆ ಸಾಕು: ನಮಗೆ ಅಷ್ಟು ಲೆಕ್ಕ ಗೊತ್ತಿಲ್ವಾ ? ಸಿದ್ದರಾಮಯ್ಯಗೆ ಡಿಸಿಎಂ ಅಶ್ವಥ್ ನಾರಾಯಣ್ ಟಾಂಗ್…

ಮೈಸೂರು,ನ,22,2019(www.justkannada.in): ಉಪಚುನಾವಣೆಯಲ್ಲಿ ಬಿಜೆಪಿ 8 ಸ್ಥಾನ ಗೆಲ್ಲಲ್ಲ ಎಂದು ಭವಿಷ್ಯ ನುಡಿದಿರುವ ಮಾಜಿ ಸಿಎಂ ಸಿದ್ಧರಾಮಯ್ಯಗೆ ಟಾಂಗ್ ನೀಡಿದ ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ್, ನಾವು 6 ಸ್ಥಾನ ಗೆದ್ದರೆ ಸಾಕು. 8 ಸ್ಥಾನ ಬೇಕಾಗಿಲ್ಲ.  ಆದರೂ ನಾವು 15 ಕ್ಷೇತ್ರಗಳಲ್ಲೂ ಗೆಲ್ಲುತ್ತೇವೆ. ಈಗಿನ ಲೆಕ್ಕ 222 ಜನ ಶಾಸಕರು ಮಾತ್ರ, ನಮಗೆ ಅಷ್ಟು ಲೆಕ್ಕ ಗೊತ್ತಿಲ್ವಾ ? ಎಂದು ಹರಿಹಾಯ್ದರು.

ಮೈಸೂರಿನಲ್ಲಿ ಇಂದು ಮಾತನಾಡಿದ ಡಿಸಿಎಂ ಅಶ್ವಥ್ ನಾರಾಯಣ್, ಕಾಂಗ್ರೆಸ್ ಜೆಡಿಎಸ್ ಪಕ್ಷದವರು ವಾರ್ ಡಿಕ್ಲೇರ್ ಮಾಡಿಕೊಂಡಿದ್ದಾರೆ. ಜೆಡಿಎಸ್ ಕಾಂಗ್ರೆಸ್ ಹೊಂದಾಣಿಕೆ ಸಾಧ್ಯವೇ ಇಲ್ಲ. ಕಾಂಗ್ರೆಸ್ ಜೆಡಿಎಸ್ ಪಕ್ಷಕ್ಕೆ ಹೊಂದಾಣಿಕೆ ಇದೆಯಾ..? ಕಾಂಗ್ರೆಸ್ ಜೆಡಿಎಸ್ ಜಿದ್ದಾ ಜಿದ್ದಿನಲ್ಲಿ ವೈರತ್ವ ತಾರಕಕ್ಕೇರಿದೆ ಎಂದು ಟೀಕಿಸಿದರು.

ಕಾಂಗ್ರೆಸ್ ಪಕ್ಷದಲ್ಲೇ ಹೊಂದಾಣಿಕೆ ಇಲ್ಲ. ಸಿದ್ದರಾಮಯ್ಯ ಪಕ್ಷದಲ್ಲಿ ಏಕಾಂಗಿಯಾಗಿದ್ದು, ಸಿದ್ದರಾಮಯ್ಯ ಅವರನ್ನು ಏಕಮೇಯ ನಾಯಕ ಮಾಡಲು ಸಾಧ್ಯವಿಲ್ಲ ಅಂತಾ ಅವರ ಪಕ್ಷದವರು ತೀರ್ಮಾನಿಸಿದ್ದಾರೆ. ಸಿದ್ದು ವಿರುದ್ದ ಕಾಂಗ್ರೆಸ್‌ನವರೇ ಸಮರ ಸಾರಿದ್ದಾರೆ. 15 ಕ್ಷೇತ್ರದಲ್ಲಿ ಸಿದ್ದರಾಮಯ್ಯ ಒಂದು ಕ್ಷೇತ್ರವನ್ನು ಗೆಲ್ಲಲ್ಲ. ನಮಗೇನು ಅವರು ಹೇಳುವುದು ? ಎಂದು ಡಿಸಿಎಂ ಅಶ್ವಥ್ ನಾರಾಯಣ್ ಆಕ್ರೋಶ ವ್ಯಕ್ತಪಡಿಸಿದರು.

ಸಿಎಂ ಯಡಿಯೂರಪ್ಪ ಟಾಸ್ಕ್ ವಿಚಾರ ಕುರಿತು ಪ್ರತಿಕ್ರಿಯಿಸಿದ ಡಿಸಿಎಂ ಅಶ್ವಥ್ ನಾರಾಯಣ್, ನಮ್ಮ ಪಕ್ಷದಲ್ಲಿ ತಲೆದಂಡ ಅದು ಇದು ಇಲ್ಲ.ಎಲ್ಲರಿಗೂ ಜವಾಬ್ದಾರಿ  ನೀಡಲಾಗಿದೆ. ಆ ಜವಾಬ್ದಾರಿಯನ್ನು ನಾವು ಸಮರ್ಥವಾಗಿ ನಿಭಾಯಿಸುತ್ತೇವೆ ಎಂದರು.

ಮಾಜಿ ಸ್ಪೀಕರ್ ಕೆ.ಆರ್ ಕೃಷ್ಣ ಅವರ ಅಶೀರ್ವಾದ ಪಡೆದೆ. ಮಂಡ್ಯಭಾಗದಲ್ಲಿ ಜನಪ್ರಿಯ ನಾಯಕರಾಗಿರುವದರಿಂದ ಇವರ ಸಹಕಾರ ಕೇಳಲು ಬಂದಿದ್ದೇನೆ.  ಈ ಭಾಗದ ಎಲ್ಲಾ ವರಿಷ್ಠರ ಅಶಿರ್ವಾದ ಪಡೆಯುತ್ತೇನೆ. ರಾಜಕೀಯವಾಗಿ ಈ ಭಾಗದ ಜಿಲ್ಲೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಸಲುವಾಗಿ ಮಂಡ್ಯ ಭಾಗದ ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಬೇಕಾಗಿದೆ. ಸಾಕಷ್ಟು ಅಭಿವೃದ್ಧಿ ಕಾರ್ಯಗಳಿಗೆ ಸಿಎಂ ಯಡಿಯೂರಪ್ಪ 150 ಕೋಟಿ ಅನುದಾನ ನೀಡಿದ್ದಾರೆ. ಮತ್ತಷ್ಟು ಈ ಭಾಗಕ್ಕೆ ಹೆಚ್ಚಿನ ಪ್ರಾತಿನಿಧ್ಯ ನೀಡಬೇಕಾದರೆ ಈ ಭಾಗದ ಬಿಜೆಪಿ ಅಭ್ಯರ್ಥಿ ಯನ್ನ ಗೆಲ್ಲಿಸಬೇಕು. ಈ ಚುನಾವಣಾ ಮಂಡ್ಯ ಜಿಲ್ಲೆ ಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವ ಚುನಾವಣೆ ಆಗಿದೆ ಎಂದು ಅಶ್ವಥ್ ನಾರಾಯಣ್ ಹೇಳಿದರು.

Key words: mysore- DCM-Ashwath Narayan- Tong –former CM-Siddaramaiah.