Saturday, October 10, 2026

Dasara Wishes

ಗೂಗಲ್ ಕಂಪನಿ ಜತೆ VTU ಶೈಕ್ಷಣಿಕ ಒಪ್ಪಂದ: ಕುಲಪತಿ ಪ್ರೊ.ಎಸ್.ವಿದ್ಯಾಶಂಕರ್ ಸಹಿ ...
Happy Dasara
Home Crime ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಕೇಸ್ ತನಿಖೆಗೆ ಕೇಂದ್ರ ಗುಪ್ತದಳದಿಂದ ನೆರವು…

ಶಾಸಕ ತನ್ವೀರ್ ಸೇಠ್ ಮೇಲೆ ಹಲ್ಲೆ ಕೇಸ್ ತನಿಖೆಗೆ ಕೇಂದ್ರ ಗುಪ್ತದಳದಿಂದ ನೆರವು…

ಮೈಸೂರು,ನ,22,2019(www.justkannada.in): ಶಾಸಕ ತನ್ವೀರ್ ಸೇಠ್ ಮೇಲಿನ ಮಾರಣಾಂತಿಕ ಹಲ್ಲೆ ಪ್ರಕರಣ ಇದೀಗ ಗಂಭೀರ ಸ್ವರೂಪ ಪಡೆದುಕೊಂಡಿದ್ದು ಪ್ರಕರಣದ ತನಿಖೆಗೆ ಕೇಂದ್ರ ಗುಪ್ತದಳದ ನೆರವು ನೀಡಿದೆ

ಘಟನೆಯ ಸಂಪೂರ್ಣ ಹಾಗು ವೈಜ್ಞಾನಿಕ ತನಿಖೆಗೆ ಕೇಂದ್ರ ಗುಪ್ತ ದಳ ಅಧಿಕಾರಿಗಳು ಮೈಸೂರು ಪೊಲೀಸರಿಗೆ ನೆರವು ನೀಡಿದ್ದಾರೆ. ಇದಕ್ಕಾಗಿ ಕಳೆದ ಮೂರು ದಿನಗಳಿಂದ ಕೇಂದ್ರ ಗುಪ್ತ ದಳದ ಅಧಿಕಾರಿಗಳ ತಂಡ ಮೈಸೂರಿನಲ್ಲಿ ಬೀಡು ಬಿಟ್ಟಿದೆ. ಓರ್ವ ಡಿಸಿಪಿ ಹಾಗು ಎಸ್.ಪಿ ದರ್ಜೆಯ ಅಧಿಕಾರಿ ಸೇರಿ ಮೂವರನ್ನೊಳಗೊಂಡಿರುವ ಕೇಂದ್ರ ಗುಪ್ತ ದಳದ ತಂಡ ಮೈಸೂರಿನಲ್ಲಿ ಠಿಕಾಣಿ ಹೂಡಿದೆ.

ಇನ್ನು ಕೇಂದ್ರ ಗುಪ್ತದಳದ ತಂಡ ತನ್ವೀರ್ ಸೇಠ್ ಮೇಲೆ ನಡೆದಿರುವ ಮಾರಣಾಂತಿಕ ಹಲ್ಲೆ ಪ್ರಕರಣದ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದೆ.

 

Key words: Central -Intelligence – Investigate –mysore-MLA -Tanveer Seth -Attack Case