ಬೆಂಗಳೂರು,ಜುಲೈ,3,2026 (www.justkannada.in): ಈ ಬಾರಿ ತೀವ್ರ ಬರಗಾಲ ಹಿನ್ನೆಲೆ ರೈತರು ಬೆಳೆ ಬೆಳೆಯುವುದು ಬೇಡ ಜಲಾಶಯಗಳು ಭರ್ತಿಯಾದ ಬಳಿಕ ಬೆಳೆ ಬೆಳೆಯಿರಿ ಎಂದು ಹೇಳಿಕೆ ನೀಡಿದ ಸಿಎಂ ಡಿಕೆ ಶಿವಕುಮಾರ್ ವಿರುದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಕಿಡಿಕಾರಿದ್ದಾರೆ.
ಈ ಕುರಿತು ಮಾತನಾಡಿದ ಬಿವೈ ವಿಜಯೇಂದ್ರ ಸಿಎಂ ನೀರಿಲ್ಲ ಬೆಳೆ ಬೆಳೆಯುವುದು ಬೇಡ ಎಂದಿದ್ದಾರೆ. ಸಿಎಂ ಮಾತಿನಿಂದ ಅಚ್ಚರಿ ಮತ್ತು ನೋವಾಗಿದೆ. ಸಿಎಂ ಪ್ರಬುದ್ದತೆಯಿಂದ ಮಾತನಾಡಬೇಕು. ರೈತರ ಆತ್ಮಸ್ಥೈರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ. ಸಿಎಂ ರೈತರಿಗೆ ಪೂರಕವಾಗಿ ಮಾತಾಡಿ ಭರವಸೆ ಕೊಡಬೇಕು. ನೀರಿಲ್ಲವೆಂದು ಸಿಎಂ ಡಿಕೆ ಶಿವಕುಮಾರ್ ಕೈಕಟ್ಟಿ ಕುಳಿತರೆ ಹೇಗೆ? ಎಂದು ಪ್ರಶ್ನಿಸಿದರು.
ತಮಿಳೂನಾಡಿಗೆ ಎಷ್ಟು ನೀರು ಬಿಟ್ಟಿದ್ದೀರಿ ತಿಳಿಸಿ ಜಲಾಶಯಗಳಲ್ಲಿ ನೀರನ್ನು ಶೇಖರಣೆ ಮಾಡಿಟ್ಟುಕೊಳ್ಳಬೇಕು ಮಹಾರಾಷ್ಟ್ರ ಸರ್ಕಾರದ ಜೊತೆ ಮಾತಾಡಿ ನೀರು ಬಿಡಿಸಬೇಕು ರಿಯಲ್ ಎಸ್ಟೇಟ್ ಬಗ್ಗೆ ಕಾಳಜಿ ಇದ್ದವರು ಅಧಿಕಾರ ಹಿಡಿದರೇ ಹೀಗೆ ಆಗೋದು. ಸಿಎಂಗೆ ರಿಯಲ್ ಎಸ್ಟೇಟ್ ಮೇಲಿರುವ ಪ್ರೀತಿ ರೈತರ ಮೇಲಿಲ್ಲ ಎಂದು ಬಿವೈ ವಿಜಯೇಂದ್ರ ಹರಿಹಾಯ್ದರು.
Key words: CM DK Shivakumar, real estate, farmers, BY Vijayendra







