Friday, October 2, 2026

BDA Apartments

Home Crime ಪೋಕ್ಸೋ ಕೇಸ್ ಆರೋಪಿ ಎಸ್ಕೇಪ್: ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ಪೋಕ್ಸೋ ಕೇಸ್ ಆರೋಪಿ ಎಸ್ಕೇಪ್: ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್

ಕಲಬುರಗಿ,ಜುಲೈ,3,2026 (www.justkannada.in): ಪೋಕ್ಸೊ ಪ್ರಕರಣದ ಆರೋಪಿ ಪೊಲೀಸ್ ಠಾಣೆಯಿಂದಲೇ ಪರಾರಿಯಾಗಿರುವ ಘಟನೆ ಕಲಬುರಗಿ ಜಿಲ್ಲೆಯ ಅಫಜಲಪುರ್ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಪೋಕ್ಸೋ ಪ್ರಕರಣದ ಆರೋಪಿ ಮಂಜಾನಾಥ್  ಪರಾರಿಯಾಗಿದ್ದಾನೆ. ಕಳೆದ ಒಂದು ವಾರದ ಹಿಂದೆ ಪೋಕ್ಸೊ ಪ್ರಕರಣ ದಾಖಲಾದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ಠಾಣೆಗೆ ಪೊಲೀಸರು ಕರೆತಂದಿದ್ದರು ಎನ್ನಲಾಗಿದೆ.ಪೋಕ್ಸೋ ಕೇಸ್ ಆರೋಪಿ ಎಸ್ಕೇಪ್: ಮೂವರು ಪೊಲೀಸ್ ಸಿಬ್ಬಂದಿ ಸಸ್ಪೆಂಡ್ BDA JK_Adv BDA Adv

ಆರೋಪಿ ಪರಾರಿ ಹಿನ್ನೆಲೆಯಲ್ಲಿ ರಾತ್ರಿ ಪಾಳಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದ ಪೊಲೀಸ್ ಕಾನ್ಸ್ ಟೇಬಲ್ ಗಳಾದ ರವಿ, ಪ್ರಶಾಂತ್ ಸೇರಿ ಮೂವರು ಸಿಬ್ಬಂದಿಗಳನ್ನು ಅಮಾನತು ಮಾಡಲಾಗಿದೆ. ಕರ್ತವ್ಯ ನಿರ್ಲಕ್ಷ್ಯ ಆರೋಪದಡಿ ಕಲಬುರಗಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅದ್ದುರು ಶ್ರೀನಿವಾಸುಲು ಅವರು ಮೂವರು ಸಿಬ್ಬಂದಿಗಳನ್ನ ಸಸ್ಪೆಂಡ್ ಮಾಡಿದ್ದಾರೆ.ಪೋಕ್ಸೋ ಕೇಸ್ ಆರೋಪಿ ಎಸ್ಕೇಪ್ jk02_new jk02 new

Key words: POCSO case, accused, escapes, police, suspended