Thursday, October 1, 2026

BDA Apartments

Home Front Page ಮೈಸೂರಿನಲ್ಲಿ ವಿಶ್ವದ ಮೊದಲ ಸ್ವತಂತ್ರ 8K LED ಡೋಮ್ ಪ್ಲಾನೆಟೇರಿಯಂ – COSMOS

ಮೈಸೂರಿನಲ್ಲಿ ವಿಶ್ವದ ಮೊದಲ ಸ್ವತಂತ್ರ 8K LED ಡೋಮ್ ಪ್ಲಾನೆಟೇರಿಯಂ – COSMOS

 

ಮೈಸೂರು, ಅ.01,2026: ಖಗೋಳ ವಿಜ್ಞಾನ ಮತ್ತು ಬಾಹ್ಯಾಕಾಶ ಸಂಶೋಧನೆಯನ್ನು ಜನಸಾಮಾನ್ಯರು, ವಿದ್ಯಾರ್ಥಿಗಳು ಹಾಗೂ ಯುವಜನರಿಗೆ ಇನ್ನಷ್ಟು ಹತ್ತಿರವಾಗಿಸುವ ಉದ್ದೇಶದಿಂದ ಮೈಸೂರಿನಲ್ಲಿ COSMOS – Cosmology Education and Research Training Centre ಯೋಜನೆ ರೂಪುಗೊಂಡಿದೆ.

ಭಾರತೀಯ ಖಗೋಳ ಭೌತಶಾಸ್ತ್ರ ಸಂಸ್ಥೆ (IIA) ನೇತೃತ್ವದಲ್ಲಿ ರೂಪುಗೊಳ್ಳುತ್ತಿರುವ COSMOS, ಅತ್ಯಾಧುನಿಕ 8K LED ಡೋಮ್ ಪ್ಲಾನೆಟೇರಿಯಂ ಹಾಗೂ ಸಂಶೋಧನಾ ತರಬೇತಿ ಕೇಂದ್ರವಾಗಲಿದೆ. IIA ಪ್ರಕಾರ, ಇದು ವಿಶ್ವದ ಮೊದಲ ಸ್ವತಂತ್ರ 8K ರೆಸಲ್ಯೂಷನ್ LED ಡೋಮ್ ಪ್ಲಾನೆಟೇರಿಯಂ ಆಗುವ ಉದ್ದೇಶ ಹೊಂದಿದೆ.

ಈ ಯೋಜನೆಯ ಪ್ರಮುಖ ಉದ್ದೇಶಗಳಲ್ಲಿ ಖಗೋಳ ವಿಜ್ಞಾನ ಮತ್ತು STEM ವಿಷಯಗಳ ಬಗ್ಗೆ ಆಸಕ್ತಿ ಬೆಳೆಸುವುದು, ವಿದ್ಯಾರ್ಥಿಗಳಿಗೆ ವಿಜ್ಞಾನಾಧಾರಿತ ತರಬೇತಿ ನೀಡುವುದು, ಶಿಕ್ಷಕರ ಕೌಶಲ್ಯಾಭಿವೃದ್ಧಿಗೆ ವೇದಿಕೆ ಕಲ್ಪಿಸುವುದು ಹಾಗೂ ಸಾರ್ವಜನಿಕರಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವಿಮರ್ಶಾತ್ಮಕ ಚಿಂತನೆಯನ್ನು ಉತ್ತೇಜಿಸುವುದು ಸೇರಿವೆ.

COSMOS Mysuru jk02_new jk02 new

ಗ್ರಾಮೀಣ ವಿದ್ಯಾರ್ಥಿಗಳಿಗೂ ಖಗೋಳ ವಿಜ್ಞಾನ :

COSMOS ಮೈಸೂರು ತಂಡ ಈಗಾಗಲೇ ಮೈಸೂರು ಜಿಲ್ಲೆಯ ಗ್ರಾಮೀಣ ಮತ್ತು ನಗರ ಪ್ರದೇಶಗಳ ಶಾಲಾ-ಕಾಲೇಜುಗಳಿಗೆ ತೆರಳಿ ಖಗೋಳ ವಿಜ್ಞಾನ, ಖಗೋಳ ಭೌತಶಾಸ್ತ್ರ ಮತ್ತು ಬಾಹ್ಯಾಕಾಶ ವಿಜ್ಞಾನದ ಕುರಿತು ಕಾರ್ಯಕ್ರಮಗಳನ್ನು ನಡೆಸುತ್ತಿದೆ. ಶಾಲಾ ಕಾರ್ಯಕ್ರಮಗಳಲ್ಲಿ ಉಪನ್ಯಾಸ, ಖಗೋಳ ಚಟುವಟಿಕೆಗಳು, ಟೆಲಿಸ್ಕೋಪ್ ವೀಕ್ಷಣೆ ಹಾಗೂ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಲಾಗುತ್ತಿದೆ.

ಖಗೋಳ ವಿಜ್ಞಾನವನ್ನು ಕನ್ನಡ ಭಾಷೆಯಲ್ಲೂ ಜನಪ್ರಿಯಗೊಳಿಸುವುದು COSMOS ಯೋಜನೆಯ ವಿಶೇಷ ಉದ್ದೇಶಗಳಲ್ಲಿ ಒಂದಾಗಿದೆ. ಇದರ ಭಾಗವಾಗಿ ಮೈಸೂರು ವಿಶ್ವವಿದ್ಯಾನಿಲಯದ ರೇಡಿಯೋ ಮಾನಸದ ಸಹಯೋಗದಲ್ಲಿ ‘ನಕ್ಷತ್ರವಾಣಿ’ ಎಂಬ ಖಗೋಳ ವಿಜ್ಞಾನ ಪಾಡ್‌ಕಾಸ್ಟ್‌ನ್ನೂ ಆರಂಭಿಸಲಾಗಿದೆ.

COSMOS Mysuru aditya L1

ಆರು ಪ್ರಮುಖ ಕ್ಷೇತ್ರಗಳಲ್ಲಿ ಜಾಗೃತಿ:

COSMOS‌ನ ವಿಜ್ಞಾನ ಜನಪ್ರಿಯಕರಣ ಕಾರ್ಯಕ್ರಮಗಳು ಪ್ರಮುಖವಾಗಿ ಆರು ಕ್ಷೇತ್ರಗಳ ಮೇಲೆ ಕೇಂದ್ರೀಕೃತವಾಗಿವೆ:

ಸಾರ್ವಜನಿಕರಲ್ಲಿ ಖಗೋಳ ವಿಜ್ಞಾನದ ಅರಿವು

ವಿಶ್ವವಿದ್ಯಾಲಯ ಮತ್ತು ಕಾಲೇಜು ಮಟ್ಟದಲ್ಲಿ ಖಗೋಳ ವಿಜ್ಞಾನ ಪರಿಚಯ

ಕನ್ನಡದಲ್ಲಿ ಪ್ರಾಚೀನ ಹಾಗೂ ಮಧ್ಯಕಾಲೀನ ಖಗೋಳ ವಿಜ್ಞಾನದ ಅಧ್ಯಯನ

Citizen Science ಕಾರ್ಯಾಗಾರಗಳು

ವಿಜ್ಞಾನ ಮತ್ತು ಶಿಕ್ಷಣ ಕಾರ್ಯಾಗಾರಗಳು

ಗ್ರಾಮೀಣ ಹಾಗೂ ನಗರ ಶಾಲೆಗಳಲ್ಲಿ ವಿಜ್ಞಾನ ಜಾಗೃತಿ

ವಿಜ್ಞಾನ ಶಿಕ್ಷಣಕ್ಕೆ ಹೊಸ ಆಯಾಮ

COSMOS ಯೋಜನೆಯಡಿ ಭವಿಷ್ಯದಲ್ಲಿ LED ಡೋಮ್‌ನ್ನು ಕೇವಲ ಆಕಾಶ ವೀಕ್ಷಣೆಗೆ ಸೀಮಿತಗೊಳಿಸದೆ, ವಿವಿಧ STEM ಕ್ಷೇತ್ರಗಳ ದತ್ತಾಂಶದ ದೃಶ್ಯೀಕರಣ ಮತ್ತು ವಿಶ್ಲೇಷಣೆಗೂ ಬಳಸುವ ಉದ್ದೇಶವಿದೆ. ಭಾರತೀಯ ಟೆಲಿಸ್ಕೋಪ್‌ಗಳಿಂದ ಲಭ್ಯವಾಗುವ ದತ್ತಾಂಶವನ್ನೂ ಇದರಲ್ಲಿ ಬಳಸುವ ಯೋಜನೆ ಇದೆ.

ಮೈಸೂರಿನಲ್ಲಿ ರೂಪುಗೊಳ್ಳುತ್ತಿರುವ ಈ ಯೋಜನೆಯು ವಿದ್ಯಾರ್ಥಿಗಳು, ಶಿಕ್ಷಕರು, ವಿಜ್ಞಾನಾಸಕ್ತರು ಹಾಗೂ ಸಾರ್ವಜನಿಕರಿಗೆ ಖಗೋಳ ವಿಜ್ಞಾನವನ್ನು ನೇರವಾಗಿ ಅನುಭವಿಸುವ ಹೊಸ ವೇದಿಕೆಯನ್ನು ಒದಗಿಸುವ ಉದ್ದೇಶ ಹೊಂದಿದೆ.

key words:

COSMOS Mysuru, 8K LED Dome Planetarium, Mysuru Planetarium, Indian Institute of Astrophysics, IIA Mysuru, Astronomy and Space Science, Cosmology, Education and Research Training Centre, STEM Education Mysuru, 8K Planetarium India

8K LED Dome Planetarium planitorium

English Summary
Title

Mysuru to Get World’s First Independent 8K LED Dome Planetarium Under COSMOS Project

Short Description
Mysuru, Oct. 1, 2026: The Cosmology Education and Research Training Centre (COSMOS) is being developed in Mysuru to bring astronomy and space science closer to the public, students and youth. Led by the Indian Institute of Astrophysics (IIA), the project will feature an advanced 8K LED dome planetarium and research training centre. According to IIA, COSMOS aims to become the world’s first independent 8K-resolution LED dome planetarium. The project will promote interest in astronomy and STEM, train students, enhance teachers’ skills and encourage scientific thinking and critical reasoning.
Keywords
COSMOS Mysuru, 8K LED Dome Planetarium, Mysuru Planetarium, Indian Institute of Astrophysics, IIA Mysuru, Astronomy and Space Science, Cosmology, Education and Research Training Centre, STEM Education Mysuru, 8K Planetarium India