ಬೆಂಗಳೂರು,ಅಕ್ಟೋಬರ್,1,2026 (www.justkannada.in): ಫಾರ್ಮ್ ೭ ಮೂಲಕ ಮತದಾರರ ಪಟ್ಟಿಯಿಂದ ಮತದಾರರ ಹೆಸರು ಡಿಲಿಟ್ ಮಾಡುವ ಹುನ್ನಾರ ನಡೆಸಲಾಗಿದೆ. ಈ ಕುರಿತು ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವರು ಚುನಾವಣಾ ಆಯೋಗದ ಮುಂದೆ ಧರಣಿ ನಡೆಸಿದ್ದಾರೆ.
ಫಾರ್ಮ್ ೭ ದುರ್ಬಳಕೆ ಮಾಡಿಕೊಂಡಿರುವವರ ವಿರುದ್ದ ಎಫ್ ಐಆರ್ ದಾಖಲಿಸಿ ತನಿಖೆ ನಡೆಸಬೇಕು ಎಂದು ಚುನಾವಣಾ ಆಯೋಗಕ್ಕೆ ಸಿಎಂ ಡಿಕೆ ಶಿವಕುಮಾರ್ ಮತ್ತು ಸಚಿವರು, ಶಾಸಕರು ಪಟ್ಟು ಹಿಡಿದಿದ್ದು ಧರಣಿ ಮುಂದುವರೆದಿದೆ.
ಈ ವೇಳೆ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಬಿ.ಕೆ ಹರಿಪ್ರಸಾದ್, ಸೆಪ್ಟಂಬರ್ 29ರಂದು ಚುನಾವಣಾ ಆಯೋಗಕ್ಕೆ ನಾನು ಪತ್ರ ಬರೆದಿದ್ದೆ. ಚುನಾವಣಾ ಆಯೋಗ ನನಗೆ ಹಿಂಬರಹ ನೀಡಿತ್ತು. ನಾನು ಬಿಜೆಪಿ ನಾಯಕ ಅಂತಾ ಬರೆದು ಹೆಸರು ಡಿಲೀಟ್ ಮಾಡಿಸಿದ್ದಾರೆ. ನಾನು ಚುನಾವಣಾ ಆಯೋಗಕ್ಕೆ ಒಟ್ಟು 9 ಪತ್ರ ಬರೆದಿದ್ದೇನೆ. ನನಗೆ ಸಮಯಾವಕಾಶ ನೀಡಿ ಎಂದು ಕೇಳೀದ್ದಾರೆ. ಎಫ್ ಐಆರ್ ದಾಖಲಿಸಿ ತನಿಖೆ ನಡೆಸುವರೆಗೂ ಧರಣಿ ಕೈಬಿಡಲ್ಲ. ಅಹೋರಾತ್ರಿ ಧರಣಿ ಮಾಡುತ್ತೇವೆ ಎಂದು ಹೇಳಿದರು.







