ಕಾಂಗ್ರೆಸ್‌ ಹಿರಿಯ ಶಾಸಕ ಟಿ.ಬಿ.ಜಯಚಂದ್ರರಿಗೆ ಬೆದರಿಕೆ ಕರೆ.

ಬೆಂಗಳೂರು,ಜುಲೈ,28,2023(www.justkannada.in): ಶಿರಾ ಕ್ಷೇತ್ರದ ಕಾಂಗ್ರೆಸ್ ಹಿರಿಯ ಶಾಸಕ ಟಿ.ಬಿ ಜಯಚಂದ್ರ ಅವರಿಗೆ ಕರೆ ಮಾಡಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದಾರೆ.

ನೈಸ್ ಸಂಸ್ಥೆ ಅಕ್ರಮದ ಬಗ್ಗೆ ರಿಪೋರ್ಟ್ ನೀಡಿದ ಬೆನ್ನಲ್ಲೆ ರೈತರಂತೆ ಕರೆ ಮಾಡಿ ಜಿ ಶಾಸಕ ಟಿ.ಬಿ.ಜಯಚಂದ್ರಗೆ ಕರೆ ಮಾಡಿ ಬೆದರಿಕೆ ಹಾಕಲಾಗಿದೆ.  ಕಳೆದ 2 ದಿನಗಳ ಹಿಂದೆ ಶಾಸಕ ಟಿಬಿ ಜಯಚಂದ್ರ ರಾಮನಗರಕ್ಕೆ ಭೇಟಿ ನೀಡಿದ್ದರು.  ನೈಸ್ ಸಂಸ್ಥೆ ಹಗರಣ ವಿಚಾರವಾಗಿ ರಾಮನಗರಕ್ಕೆ ಭೇಟಿ ಕೊಟ್ಟು ರೈತರ ಜೊತೆ ಚರ್ಚಿಸಿದ್ದರು.  ರೈತರ ಭೇಟಿ ಬೆನ್ನಲ್ಲೆ ಟಿ.ಬಿ ಜಯಚಂದ್ರರಿಗೆ ಬೆದರಿಕೆ ಕರೆ ಬಂದಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಅವರು, ನನಗೆ ಬೆದರಿಕೆ ಕರೆ ಬಂದಿದ್ದುನಿಜ. ನೈಸ್ ಸಂಸ್ಥೆ ಅಕ್ರಮದ ಬಗ್ಗೆ ನಾನು ರಿಪೋರ್ಟ್ ನೀಡಿದ್ದೆ. ರೈತರು ಮನವಿ ಮಾಡಿದ್ದರಿಂದ ಬಿಡದಿಗೆ ಹೋಗಿದ್ದೆ. ರೈತರ ಭೇಟಿ ಮಾಡಿ ಬಂದ ಬಳಿಕ ಬೆದರಿಕೆ ಕರೆ ಬಂದಿದೆ.  ನಿಮಗೂ ಇದಕ್ಕೂ ಏನು ಸಂಬಂಧ ಏಕೆ ಬರ್ತೀರಿ ಎಂದರು. ನಾನು ಇಂತಹ ಬೆದರಿಕೆಗೆ ಹೆದರಿಕೊಳ್ಳುವುದಿಲ್ಲ. ರೈತರ ಹಿತಾಸಕ್ತಿ ದೃಷ್ಠಿಯಿಂದ ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಟಿ.ಬಿ ಜಯಚಂದ್ರ ಆಗ್ರಹಿಸಿದರು.

Key words: Threatening call – senior- Congress- MLA -TB Jayachandra