ವಿದ್ಯಾರ್ಥಿನಿಲಯಕ್ಕೆ ಡಿಸಿಎಂ ಗೋವಿಂದ ಕಾರಜೋಳ ದಿಢೀರ್ ಭೇಟಿ: ಅಧಿಕಾರಿಗಳ ವಿರುದ್ದ ಕಿಡಿ….

ಬೆಂಗಳೂರು,ಸೆ,11,2019(www.justkannada.in): ನೆಲಮಂಗಲ ಟೌನ್ ನ ಸರ್ಕಾರಿ ಮೆಟ್ರಿಕ್ ನಂತರದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಉಪಮುಖ್ಯಮಂತ್ರಿಗಳಾದ ಗೋವಿಂದ ಕಾರಜೋಳ ರವರು ಇಂದು‌ ದಿಢೀರ್ ಭೇಟಿ  ನೀಡಿ ಹಾಸ್ಟೆಲ್ ಮುಂದೆ ಇದ್ದ ಕಸದ ರಾಶಿ ನೋಡಿ ಅಧಿಕಾರಿಗಳ ಮೇಲೆ ಕಿಡಿಕಾರಿದರು. ಕೂಡಲೇ ಕಸ ತೆಗೆಯುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಹಾಸ್ಟೆಲ್ ವ್ಯವಸ್ಥೆಯ ಬಗ್ಗೆ ಬೆಂಗಳೂರು ಗ್ರಾಮಾಂತರ ಜಿಲ್ಲಾಧಿಕಾರಿಗಳ ಜತೆ ಡಿಸಿಎಂ ಗೋವಿಂದ ಕಾರಜೋಳ ಪರಿಶೀಲಿಸಿದರು.

ವಸತಿ ನಿಲಯಗಳಲ್ಲಿ  ವಿದ್ಯಾರ್ಥಿಗಳಿಗೆ ಸರ್ಕಾರ ನೀಡುವ ಎಲ್ಲಾ ಸೌಲಭ್ಯಗಳನ್ನು‌ ವ್ಯವಸ್ಥಿತವಾಗಿ  ನೀಡಬೇಕು. ವಿದ್ಯಾರ್ಥಿಗಳಿಗೆ  ಪರೀಕ್ಷಾ ಪೂರ್ವ ಸಿದ್ದತೆ ಹಾಗೂ  ಉತ್ತಮ ಫಲಿತಾಂಶಕ್ಕೆ ಪೂರಕ ಕ್ರಮ ಕೈಗೊಳ್ಳಬೇಕು ಎಂದು ಸಮಾಜಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಡಿಸಿಎಂ ಗೋವಿಂದ ಕಾರಜೋಳ ಸೂಚಿಸಿದರು.

Key words: DCM -Govinda Karajola- immediate -visit – hostel-bangalore