ಗ್ರಾಮಪಂಚಾಯತಿಗಳನ್ನು ನಗರ ಪಾಲಿಕೆಗೆ ಸೇರಿಸುವ ವಿಚಾರ ಮತ್ತು ಡಿಸಿ ಕಚೇರಿ ಸ್ಥಳಾಂತರದ ಬಗ್ಗೆ ಮಾಹಿತಿ ನೀಡಿದ  ಮೈಸೂರು ಡಿಸಿ ಅಭಿರಾಂ ಜೀ ಶಂಕರ್ ..

ಮೈಸೂರು,ಫೆ,26,2020(www.justkannada.in): ಡಿಸಿ ಕಚೇರಿ ಸ್ಥಳಾಂತರಕ್ಕೆ ಸಿದ್ದತೆ ಮಾಡಿಕೊಳ್ಳಲಾಗಿದೆ. ಮಾರ್ಚ್ ಅಂತ್ಯದ ಒಳಗೆ  ಕಚೇರಿ ಶಿಫ್ಟ್ ಆಗುವ ಸಾಧ್ಯತೆ ಇದೆ ಎಂದು ಮೈಸೂರು ಜಿಲ್ಲಾಧಿಕಾರಿ ಅಭೀರಾಂ ಜೀ ಶಂಕರ್ ತಿಳಿಸಿದರು.

ಮೈಸೂರಿನಲ್ಲಿ ಮಾತನಾಡಿದ ಮೈಸೂರು ಡಿಸಿ ಅಭಿರಾಂ ಜೀ ಶಂಕರ್, ನೂತನ ಕಚೇರಿ ಕೆಲಸ ಕಾರ್ಯಗಳು ಅಂತಮ ಹಂತ ತಲುಪಿವೆ. ನೂತನ ಡಿಸಿ ಕಚೇರಿಯಲ್ಲಿ 34 ರಿಂದ 40 ಲಕ್ಷದ ಕೇಬಲಿಂಗ್ ಬಿಲ್ ಬಾಕಿ ಉಳಿದಿತ್ತು. ಕೇಬಲಿಂಗ ಬಿಲ್ ಬಾಕಿ ಉಳಿದಿದ್ದರಿಂದ ಕೆಲಸ ಆಗಿರಲಿಲ್ಲ. ಈಗ ಮತ್ತೆ ಅನುಮತಿ ಪಡೆದು ಶಾರ್ಟ್ ಟೈಂ ಟೆಂಡರ್ ಕರೆದು ಕೆಲಸ ಪ್ರಾರಂಭಿಸಿದ್ದೆವೆ. ಇನ್ನೂ ಎರಡು ವಾರದಲ್ಲಿ ಕೇಬಲಿಂಗ್ ಕೆಲಸ ಮುಕ್ತಾಯವಾಗಲಿದೆ. ನಮ್ಮ ಎಲ್ಲಾ ಕಡತಗಳು ತಂತ್ರಂಶಾದಲ್ಲಿದೆ. ಆದ್ದರಿಂದ ನಮಗೆ ಸರ್ಕಾರಿ ನೆಟ್ ವರ್ಕ್ ಬೇಕಾಗುತ್ತೆ,  ಯಾವುದೇ ಖಾಸಗಿ ನೆಟ್ ವರ್ಕ್ ನಲ್ಲಿ ಬಳಕೆ ಮಾಡಲು ಸಾಧ್ಯವಿಲ್ಲ. ಈಗ ನೆಟ್ವರ್ಕ್ ಕೆಲಸ ಮುಗಿದು ಬಂದಿದೆ, ಆ ಕೆಲಸ ಮುಗಿದ ತಕ್ಷಣ ನೂತನ ಕಟ್ಟಡಕ್ಕೆ ಶಿಫ್ಟ್ ಆಗಲಿದ್ದೇವೆ. ಅಲ್ಲಿಗೆ ಶಿಫ್ಟ್ ಆದ ನಂತರ ಕೆಲಸಕ್ಕೆ ತೊಂದರೆ ಆಗಬಾರದೆಂಬ ಉದ್ದೇಶದಿಂದ ಎಲ್ಲ ಕೆಲಸ ಮುಕ್ತಾಯ ನಂತರ ಶಿಫ್ಟ್ ಮಾಡಲಾಗುವುದು. ಮಾರ್ಚ್ ಅಂತ್ಯದ ಒಳಗೆ ಶಿಫ್ಟ್ ಆಗುವ ಸಾಧ್ಯತೆ ಇದೆ ಎಂದು ತಿಳಿಸಿದರು.

ಮೈಸೂನ ಆಸುಪಾಸಿನ ಗ್ರಾಮಪಂಚಾಯತಿ ಗಳನ್ನು  ನಗರ ಪಾಲಿಕೆಗೆ ಸೇರಿಸುವ ವಿಚಾರ ಕುರಿತು ಮಾಹಿತಿ ನೀಡಿದ ಜಿಲ್ಲಾಧಿಕಾರಿ ಅಭಿರಾಮ್ ಜಿ ಶಂಕರ್ , ಈ ಬಗ್ಗೆ ಈಗಾಗಲೇ ಸರ್ಕಾರಕ್ಕೆ ಪತ್ರ ಬರೆಯಲಾಗಿದೆ. ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸರ್ಕಾರಕ್ಕೆ ತಿಳಿಸಲಾಗಿದೆ.  ಚಾಮುಂಡೇಶ್ವರಿ ಕ್ಷೇತ್ರದ ವಿಭಾಗದ ಬೋಗಾದಿ, ಹಿನಕಲ್, ಹೂಟಗಳ್ಳಿ ಮುಂತಾದ ಗ್ರಾ.ಪಂ ಗಳನ್ನು ನಗರ ಪಾಲಿಕೆ ಸೇರಿಸುವಂತೆ ಶಿಫಾರಸ್ಸು ಮಾಡಲಾಗಿದೆ. ಹಣಕಾಸಿನ ಸಾಧಕ ಬಾಧಕಗಳನ್ನ ನೋಡಿ ಸರ್ಕಾರ ನಿರ್ಧಾರ ಕೈಗೊಳ್ಳಲಿದೆ. ಈ ವಿಚಾರ ಕ್ಯಾಬಿನೆಟ್ ನಲ್ಲಿ ತೀರ್ಮಾನವಾಗಬೇಕಿದೆ‌ ಎಂದು ಹೇಳಿದರು.

 

ಗ್ರಾ.ಪಂ ವ್ಯಾಪ್ತಿಯ ಗ್ರಾಮಗಳನ್ನ ನಗರ ಪಾಲಿಕೆ ಸೇರಿಸುವುದರಿಂದ ಗ್ರಾಮ ಪಂಚಾಯತಿ ಚುನಾವಣೆ ನಡೆಯುವ ಬಗ್ಗೆ ಅನುಮಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಅಭಿರಾಂ ಜೀ ಶಂಕರ್,  ಗ್ರಾಮೀಣ ಅಭಿವೃದ್ಧಿಗೆ ಈ ವಿಚಾರವಾಗಿ ಕಡತ ಕಳುಹಿಸಲಾಗಿದೆ. ಸಂಭಂದಪಟ್ಟ ನಿರ್ದೇಶಕರೊಂದಿಗೆ ಮಾತನಾಡಿದ್ದೇವೆ. ಕೂಡಲೇ ಎನ್ ಒ ಸಿ ಸಿಗುವ ನಿರೀಕ್ಷೆ ಇದೆ. ನಂತರದಲ್ಲಿ ನಗರಾಭಿವೃದ್ದಿ ಇಲಾಖೆಗೆ ನಗರ ಪಾಲಿಕೆ ಸೇರಿಸುವ ಬಗ್ಗೆ ಮಾಹಿತಿ ಬರುತ್ತದೆ. ಈ ಮಾಹಿತಿಯನ್ನ ರಾಜ್ಯ ಚುನಾವಣ ಆಯೋಗಕ್ಕೆ ಕಳುಹಿಸಲಾಗುತ್ತದೆ ಚುನಾವಣ ಇಲಾಖೆ ಆ ಪ್ರದೇಶಗಳಿಗೆ ಚುನಾವಣೆ ನಡೆಸುವ ಬಗ್ಗೆ ತೀರ್ಮಾನ ಕೈಗೊಳ್ಳುತ್ತೆ. ಸರ್ಕಾರದಲ್ಲಿ ಕೈಗೊಳ್ಳುವ ತಿರ್ಮಾನಕ್ಕಾನುಗುಣವಾಗಿ ಚುನಾವಣಾ ಆಯೋಗ ನಿರ್ಧಾರ ಮಾಡುತ್ತದೆ ಎಂದು ತಿಳಿಸಿದರು.

Key words: Mysore DC- Abhiram Ji Shankar-information – inclusion – Grama Panchayatಹ-  DC Office- Displacement