Saturday, September 19, 2026

BDA Apartments

ತೆರೆ ಮೇಲೆ ‘ದಾದಾಗಿರಿ’ ನೋಡಲು ರೆಡಿಯಾಗಿ! BDA JK_Adv BDA Adv
Home Cinema ತೆರೆ ಮೇಲೆ ‘ದಾದಾಗಿರಿ’ ನೋಡಲು ರೆಡಿಯಾಗಿ!

ತೆರೆ ಮೇಲೆ ‘ದಾದಾಗಿರಿ’ ನೋಡಲು ರೆಡಿಯಾಗಿ!

ಬೆಂಗಳೂರು, ಫೆಬ್ರವರಿ 25, 2020 (www.justkannada.in): ಭಾರತ ಕ್ರಿಕೆಟ್ ತಂಡ ಮಾಜಿ ನಾಯಕ ಸೌರವ್ ಗಂಗೂಲಿ ಅವರ ಬಯೋಪಿಕ್ ಮೂಡಿ ಬರಲಿದೆ ಎಂಬ ವಿಷಯ ಹೊರಬಿದ್ದಿದೆ.

ಪ್ರಸ್ತುತ ಬಿಸಿಸಿಐ (ಭಾರತೀಯ ಕ್ರಿಕೆಟ್ ಮಂಡಳಿ) ಅಧ್ಯಕ್ಷ ಸೌರವ್ ಗಂಗೂಲಿ ಅವರ ಜೀವನಕಥೆಯನ್ನು ತೆರೆಮೇಲೆ ತರಲು ಬಾಲಿವುಡ್ ನಿರ್ಮಾಪಕ ಕರಣ್ ಜೋಹರ್ ಸಜ್ಜಾಗಿದ್ದಾರೆ. ಈ ಕುರಿತು ಗಂಗೂಲಿ ಅವರನ್ನು ಕರಣ್ ಭೇಟಿ ಮಾಡಿ ಚರ್ಚಿಸಿದ್ದಾರಂತೆ.

ಸದ್ಯದ ಟಾಕ್ ಪ್ರಕಾರ ಸೌರವ್ ಗಂಗೂಲಿ ಪಾತ್ರಕ್ಕಾಗಿ ಬಿಟೌನ್ ಸ್ಟಾರ್ ನಟನನ್ನು ಕರೆತರುವ ಮಾತುಕತೆ ಆಗುತ್ತಿದೆಯಂತೆ. ಎಲ್ಲ ಅಂದುಕೊಂಡಂತೆ ಆದರೆ ಹೃತಿಕ್ ರೋಷನ್, ತೆರೆಮೇಲೆ ಗಂಗೂಲಿಯಾಗಲಿದ್ದಾರೆ ಎನ್ನಲಾಗುತ್ತಿದೆ.