Monday, September 21, 2026

BDA Apartments

ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಖಂಡನೆ: ಹಿಂಪಡೆ...
Home Front Page ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಖಂಡನೆ: ಹಿಂಪಡೆಯುವಂತೆ ಆಗ್ರಹ.

ಕಾಂಗ್ರೆಸ್ ಮುಖಂಡ ಮಿಥುನ್ ರೈ ಹೇಳಿಕೆಗೆ ಪ್ರಮೋದ್ ಮುತಾಲಿಕ್ ಖಂಡನೆ: ಹಿಂಪಡೆಯುವಂತೆ ಆಗ್ರಹ.

ಉಡುಪಿ,ಮಾರ್ಚ್,9,2023(www.justkannada.in):  ಉಡುಪಿ ಶ್ರೀಕೃಷ್ಣ ಮಠಕ್ಕೆ ಜಾಗ ಕೊಟ್ಟಿದ್ದು ಮುಸ್ಲೀಂ ರಾಜರು ಎಂದು ಹೇಳಿಕೆ ನೀಡಿದ್ದ ಕಾಂಗ್ರೆಸ್ ಮುಖಂಡ ಮಿಥುನ್ ರೈ ವಿರುದ್ದ ಶ್ರೀರಾಮಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ಕಿಡಿಕಾರಿದ್ದಾರೆ.

ಈ ಕುರಿತು ಮಾತನಾಡಿದ ಪ್ರಮೋದ್ ಮುತಾಲಿಕ್,  ಸಾವಿರಾರು ವರ್ಷದಿಂದ ಮಠಧಲ್ಲಿ ಪೂಜೆ ನಡೆಯುತ್ತಿದೆ.  ಮುಸ್ಲೀಂ ವೋಟ್ ಬ್ಯಾಂಕ್ ಗಾಗಿ ಈ ರೀತಿ ಹೇಳಿಕೆ ನೀಡಿದ್ದಾರೆ.  ಕೀರ್ತಿ ಗಳಿಸಲು ಇಂತಹ ಅಸಹ್ಯ  ಹೇಳಿಕೆ ನೀಡಿದ್ದಾರೆ. ಚುನಾವಣೆ ಹೊತ್ತಲ್ಲಿ ಇಂತಹ ಹೇಳಿಕೆ ಬೇಕಿತ್ತಾ…? ಎಂದು ಪ್ರಶ್ನಿಸಿದರು.

ಮಿಥುನ್ ರೈ  ತಮ್ಮ ಹೇಳಿಕೆಯನ್ನ ಹಿಂಪಡೆಯಬೇಕು.  ಇಲ್ಲದಿದ್ದರೇ ಹಿಂದೂಗಳು ಮತ ಹಾಕಲ್ಲ ಎಂದು ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದರು.

Key words: Pramod Muthalik -condemns –Congress- leader-Mithun Rai- statement