ಅತ್ತ ಪ್ರವಾಹ, ಇತ್ತ  ಕೊರೋನಾ: ಮೈಸೂರು ದಸರಾ ಉನ್ನತ ಮಟ್ಟದ ಸಮಿತಿ ಸಭೆ ಅನುಮಾನ….

ಮೈಸೂರು,ಆ,10,2020(www.justkannada.in): ಒಂದೆಡೆ ರಾಜ್ಯದಲ್ಲಿ ಕೊರೋನಾ ಮಹಾಮಾರಿ ಅಟ್ಟಹಾಸ ಮೆರೆಯುತ್ತಿದ್ದರೇ ಇತ್ತ ಭಾರಿ ಮಳೆಯಿದಾಗಿ ರಾಜ್ಯ ಪ್ರವಾಹ ಪರಿಸ್ಥಿತಿ ಎದುರಿಸುತ್ತಿದೆ. ಪ್ರವಾಹ ಮತ್ತು ಕೊರೋಣಾ ಭೀತಿಯ ಎಫೆಕ್ಟ್ ಈ ಭಾರಿಯ ದಸರಾಗೆ ತಟ್ಟಿದೆ. ಹೌದು ಈ ಭೀತಿಯಿಂದಾಗಿ ದಸರಾ ಸಿದ್ಧತೆಗಳಿಗೆ ಗರ ಬಂದಂತಾಗಿದೆ.jk-logo-justkannada-logo

ಕೊರೋನಾ ಸೋಂಕಿನಿಂದಾಗಿ ಸಿಎಂ‌ ಯಡಿಯೂರಪ್ಪ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಎಸ್.ಟಿ.ಸೋಮಶೇಖರ್, ಪ್ರವಾಸೋದ್ಯಮ ಸಚಿವ ಸಿ.ಟಿ.ರವಿ, ಸಚಿವ ಆನಂದ್ ಸಿಂಗ್, ಶಾಸಕರಾದ ಜಿ.ಟಿ.ದೇವೇಗೌಡ, ಡಾ.ಯತೀಂದ್ರ ಸಿದ್ದರಾಮಯ್ಯ ಸೇರಿ ಸಮಿತಿ ಸದಸ್ಯರಲ್ಲಿ ಬಹುತೇಕರು ಕ್ವಾರಂಟೈನ್ ನಲ್ಲಿದ್ದಾರೆ

ದಸರಾ ಸಂಬಂಧ ಆಗಸ್ಟ್ 15ರೊಳಗೆ ಹೈಪವರ್ ಕಮಿಟಿ ಸಭೆ ನಡೆಯಬೇಕಿತ್ತು. ಆದರೆ ಸಮಿತಿ ಸದಸ್ಯರಲ್ಲಿ ಬಹುತೇಕರು ಕ್ವಾರಂಟೈನ್ ನಲ್ಲಿದ್ದು ಈ ಹಿನ್ನೆಲೆ ಉನ್ನತ ಮಟ್ಟದ ಸಮಿತಿ ಸಭೆ ನಡೆಯೋದು ಅನುಮಾನವಾಗಿದೆ. ಮೊದಲ ಸಭೆಯ ಬಳಿಕವಷ್ಟೇ ದಸರಾ ರೂಪುರೇಷೆ ಬಗ್ಗೆ ಸ್ಪಷ್ಟತೆ ಸಿಗಲಿದೆ. ಆದ್ರೆ ಇದುವರೆಗೂ ಸಭೆಯ ದಿನಾಂಕವೇ ನಿಗದಿಯಾಗಿಲ್ಲ. ಪ್ರವಾಹದ ಕಾರಣಕ್ಕಾಗಿ ಸಭೆ ಮುಂದೂಡಿಕೆಯಂತೂ ಅನಿವಾರ್ಯವಾಗಿದೆ.Mysore -Dasara -high-level committee- meeting -doubtful.

ವಿಶ್ವ ವಿಖ್ಯಾತ ಮೈಸೂರು ದಸರಾ ಎಂದರೇ ದೇಶ ವಿದೇಶಗಳಿಂದಲೂ ಪ್ರವಾಸಿಗರು ಬಂದು ಪ್ರತಿವರ್ಷ ದಸರಾ ಕಣ್ತುಂಬಿಕೊಳ್ಳುತ್ತಾರೆ. ಆದರೆ ಕೊರೋನಾ ಹೆಚ್ಚಾಗಿರುವ ಹಿನ್ನೆಲೆ ಈ ಬಾರಿ ಜನ ಸೇರದ ರೀತಿಯಲ್ಲಿ ದಸರಾ ಆಚರಿಸುವುದೇ ಸರ್ಕಾರಕ್ಕೆ ದೊಟ್ಟ  ಸವಾಲಾಗಿದೆ.

Key words: Mysore -Dasara -high-level committee- meeting -doubtful.