Saturday, November 7, 2026

Dasara Wishes

Just Kannada DasraWishes_JK DasraWishes JK
Happy Dasara
Home Front Page ಜಿ.ಎನ್ ಮೋಹನ್ ಸ್ಪೆಷಲ್ : ನಾಗಸಾಕಿಯ ಮೇಲೆ ತಲ್ಲಣದ ಮಳೆ ಸುರಿದ ದಿನ ಇಂದು.

ಜಿ.ಎನ್ ಮೋಹನ್ ಸ್ಪೆಷಲ್ : ನಾಗಸಾಕಿಯ ಮೇಲೆ ತಲ್ಲಣದ ಮಳೆ ಸುರಿದ ದಿನ ಇಂದು.

BANGALORE, AUGUST 09, 2020 : ನಾನು ೧೯೮೬ರಲ್ಲಿ ಬರೆದಿದ್ದ ಈ ಪುಟ್ಟ ಬರಹ ಮತ್ತೆ ಕಲಕಿತು
3+1=0
ಎಂದು ಬರೆದರೆ ಬಹುಶಃ ನಿಮಗೆ ಸಿಗುವ ಅಂಕಿ ಕೂಡ ಸೊನ್ನೆಯೇ ಆಗಬಹುದು.
ಆದರೆ ಯುದ್ಧ ದೇಶಗಳಲ್ಲಿ ಅಪಾರ ಸಹಾನುಭೂತಿ ಸಿಗುತ್ತದೆ.
ನಿಮ್ಮ ದೇಶದಲ್ಲಿ ಮೂರಕ್ಕೆ ಒಂದು ಕೂಡಿದರೆ ನಾಲ್ಕಾಗುತ್ತದೆ.
ಆದರೆ ಯುದ್ಧ ದೇಶಗಳಲ್ಲಿ ಹಾಗಲ್ಲ.
ಮೂರಕ್ಕೆ ಒಂದು ಕೂಡಿದರೆ ಸೊನ್ನೆಯಾಗುತ್ತದೆ.
ಗಣಿತ ಜಾಗತಿಕ ಸತ್ಯ. ಯಾವಾಗಲೂ ಸುಳ್ಳು ಹೇಳುವುದಿಲ್ಲ. ಎಂದು ಸಾಬೀತಾಗಿರುವಾಗ ನೀವು ಒಂದು ಕ್ಷಣ ಬೆರಗಾಗಬಹುದು.
ಆದರೆ ಇದು ವಿಚಿತ್ರ ಆದರೂ ಸತ್ಯ, ಕ್ರೂರವಾಸ್ತವ.
ತನ್ನ ತಂದೆ, ತಾಯಿ, ತಮ್ಮ ಮೂವರನ್ನೂ ಕೇವಲ ಒಂದು ಯುದ್ಧ ಬಾಂಬಿನಿಂದ ಕಳೆದುಕೊಂಡ ಈ ಏಕಾಂಗಿ ಬಾಲಕ ತಾನೇ ಕಂಡು ಹಿಡಿದ ಹೊಸ ಅಂಕಗಣಿತ ಇದು.
3+1=0
ಹೌದು! ಯುದ್ಧ ಒಮ್ಮೆ ನಿಮ್ಮ ಮನೆ ಬಾಗಿಲಿಗೆ ಬಂದರೆ ಸಾಕು ಅದು ಜಗತ್ತಿನ ಅನೇಕ ಸತ್ಯಗಳನ್ನು ಬದಲು ಮಾಡುತ್ತದೆ.
3+1=0 ಈ 3 ರ ಸ್ಥಾನದಲ್ಲಿ ನೀವು ನೂರು ಇಟ್ಟರೂ ಅಷ್ಟೆ. ಲಕ್ಷ ಇಟ್ಟರೂ ಅಷ್ಟೆ. ಅದರ ಬದಿಗೆ ಒಂದೇ ಒಂದು ಬಾಂಬು ಇಡಿ. ನಿಮ್ಮ ಅಂಕಗಣಿತವೆಲ್ಲಾ ತಲೆಕೆಳಗಾಗುತ್ತದೆ.
ಹಾಗೇ ನಿಮ್ಮ ಜೀವಗಳು ಕೂಡಾ…

G.N.Mohan-kannada-journalist-media

ooooo

KEY WORDS : G.N.Mohan-kannada-journalist-media