Monday, September 14, 2026

BDA Apartments

ದಶಕಗಳ ಬಳಿಕ ಬೆಳ್ಳಿ ತೆರೆಗೆ ಶಿಲ್ಪಾ ಶೆಟ್ಟಿ ಕಮ್ ಬ್ಯಾಕ್ ! BDA JK_Adv BDA Adv
Home Cinema ದಶಕಗಳ ಬಳಿಕ ಬೆಳ್ಳಿ ತೆರೆಗೆ ಶಿಲ್ಪಾ ಶೆಟ್ಟಿ ಕಮ್ ಬ್ಯಾಕ್ !

ದಶಕಗಳ ಬಳಿಕ ಬೆಳ್ಳಿ ತೆರೆಗೆ ಶಿಲ್ಪಾ ಶೆಟ್ಟಿ ಕಮ್ ಬ್ಯಾಕ್ !

ನವದೆಹಲಿ, ಆಗಸ್ಟ್ 07, 2019 (www.justkannada.in): ನಟಿ ಶಿಲ್ಪಾ ಶೆಟ್ಟಿ ‘ನಿಕಮ್ಮಾ’ ಸಿನಿಮಾದ ಮೂಲಕ ಮತ್ತೆ ತಮ್ಮ ಸಿನಿ ಪಯಣ ಮುಂದುವರಿಸುತ್ತಿದ್ದಾರೆ.

2007ರಲ್ಲಿ ತೆರೆಕಂಡಿದ್ದ ‘ಅಪ್ನೆ’ ಸಿನಿಮಾದ ನಂತರ ಕೆಲವು ಅತಿಥಿ ಪಾತ್ರವನ್ನು ಮಾಡುತ್ತಿದ್ದರು. ಬಳಿಕ 2009ರಲ್ಲಿ ಶಿಲ್ಪಾ ಶೆಟ್ಟಿ ಅವರು ರಾಜ್ ಕುಂದ್ರಾ ಜೊತೆ ಮದುವೆಯಾಗಿದ್ದು, ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಂತರ ಚಿತ್ರರಂಗದಿಂದ ದೂರ ಸರಿದಿದ್ದರು.

ಈ ಕುರಿತು ಮಾತನಾಡಿರುವ ಶಿಲ್ಪಾ ಶೆಟ್ಟಿ, ನಾನು ಸಿನಿಮಾಗಾಗಿ ತಯಾರಿ ಮಾಡಿಕೊಳ್ಳುತ್ತಿದ್ದೇನೆ. ಈಗ ಎಲ್ಲವೂ ನನಗೆ ಹೊಸದು. ಚಿತ್ರದ ಸ್ಕ್ರಿಪ್ಟ್ ನನಗೆ ತುಂಬಾ ಇಷ್ಟವಾಯಿತು. ಇದೊಂದು ರೊಮ್ಯಾಂಟಿಕ್, ಹಾಸ್ಯದ ಸಿನಿಮಾ ಎಂದು ಹೇಳಿದ್ದಾರೆ.