ಮೈಸೂರು ದಸರಾಗೆ ಆರಂಭದಲ್ಲೇ ವಿಘ್ನ: ಬಣ್ಣ ಬಳಿಯುವ ವೇಳೆ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಕಾರ್ಮಿಕ.

ಮೈಸೂರು,ಸೆಪ್ಟಂಬರ್, 22,2021(www.justkannada.in):  ವಿಶ್ವ ವಿಖ್ಯಾತ ಮೈಸೂರು ದಸರಾಗೆ ದಿನಗಣನೆ ಆರಂಭವಾಗಿದ್ದು, ಈ ಮಧ್ಯೆ ದಸರಾಗೆ ಆರಂಭದಲ್ಲೇ ವಿಘ್ನ ಎದುರಾಗಿದೆ. ಹೌದು ಬಣ್ಣ ಬಳಿಯುವ ವೇಳೆ ಕಾರ್ಮಿಕ ಆಯತಪ್ಪಿ ಕೆಳಗೆ ಬಿದ್ದು ಗಂಭೀರ ಗಾಯಗೊಂಡ ಘಟನೆ ನಡೆದಿದೆ.

ಗೌಸಿಯಾ ನಗರದ ನಿವಾಸಿ ಅಫ್ತಾಬ್ ಗಾಯಗೊಂಡಿರುವವರು. ಅಕ್ಟೋಬರ್ 7 ರಿಂದ ದಸರಾ ಹಿನ್ನಲೆ ಅರಮನೆಗೆ ಸುಣ್ಣಬಣ್ಣ ಬಳಿಯುವ ಕಾರ್ಯ ನಡೆಯುತ್ತಿತ್ತು. ಈ ನಡುವೆ ಬಣ್ಣ ಬಳಿಯುವ ವೇಳೆ ಕಾರ್ಮಿಕ ಆಯತಪ್ಪಿ ಅರಮನೆ ಗೋಪುರದ 20 ಅಡಿ ಎತ್ತರರಿಂದ ಕೆಳಗೆ ಬಿದ್ದಿದ್ದು ಗಂಭೀರ ಗಾಯಗೊಂಡಿದ್ದಾರೆ.

ಅರಮನೆಯ ಜಯಮಾರ್ತಾಂಡ ದ್ವಾರ ಗೋಪುರಕ್ಕೆ ಬಣ್ಣ ಬಳಿಯುತ್ತಿದ್ದಾಗ ಈ ಘಟನೆ ನಡೆದಿದೆ.  ಅಸ್ವಸ್ಥ ಅಪ್ತಾಬ್ ರನ್ನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

Key words: mysore dasara- paint- Fall down-serious injury