Friday, August 7, 2026

BDA Apartments

Home Front Page ಬಿಜೆಪಿ ಸೌಜನ್ಯಕ್ಕೂ ಕರೆ ಮಾಡಿಲ್ಲ:  ನಾವು ಆತ್ಮಸಾಕ್ಷಿಗೆ ಮತ ಹಾಕಿದ್ದೇವೆ- ಶಾಸಕ ಶಿವರಾಂ ಹೆಬ್ಬಾರ್

ಬಿಜೆಪಿ ಸೌಜನ್ಯಕ್ಕೂ ಕರೆ ಮಾಡಿಲ್ಲ:  ನಾವು ಆತ್ಮಸಾಕ್ಷಿಗೆ ಮತ ಹಾಕಿದ್ದೇವೆ- ಶಾಸಕ ಶಿವರಾಂ ಹೆಬ್ಬಾರ್

ಬೆಂಗಳೂರು,ಜೂನ್,18,2026 (www.justkannada.in): ಬಿಜೆಪಿಯವರು ಸೌಜನ್ಯಕ್ಕೂ ಕರೆ ಮಾಡಿಲ್ಲ, ಹೀಗಾಗಿ ನಾನು ಮತ್ತು ಎಸ್ ಟಿ ಸೋಮಶೇಖರ್ ಆತ್ಮಸಾಕ್ಷಿಗೆ ಮತ ಹಾಕಿದ್ದೇವೆ ಎಂದು ಬಿಜೆಪಿ ಉಚ್ಚಾಟಿತ ಶಾಸಕ ಶಿವರಾಂ ಹೆಬ್ಬಾರ್ ತಿಳಿಸಿದರು.

ಇಂದು ವಿಧಾನ ಪರಿಷತ್ ನ 7 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು ಸಂಜೆ 5 ಗಂಟೆಗೆ ಮತ ಎಣಿಕೆ ನಡೆದು ಫಲಿತಾಂಶ ಪ್ರಕಟವಾಗಲಿದೆ. ಇನ್ನು ಬಿಜೆಪಿಯ ಉಚ್ಚಾಟಿತ ಶಾಸಕ ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಗೆ ಮತ ಹಾಕಿರುವುದಾಗಿ ತಿಳಿಸಿದ್ದಾರೆ.

ಈ ಕುರಿತು ಮಾತನಾಡಿದ ಶಾಸಕ ಶಿವರಾಂ ಹೆಬ್ಬಾರ್, ಕಾಂಗ್ರೆಸ್ ಹೈಕಮಾಂಡ್ ಹಾಗೂ ಸಿಎಂ ಬೆಂಬಲ ಕೇಳಿದ್ದರು. ನಿಮ್ಮ ಬೆಂಬಲ ನಮಗೆ, ನಮ್ಮ ಬೆಂಬಲ ನಿಮಗೆ ಎಂದಿದ್ದಾರೆ ಜೆಡೆಎಸ್ ನವರು ಕರೆ ಮಾಡಿಲ್ಲ ಯತ್ನಾಳ್ ವಿಚಾರವೇ ಬೇರೆ ನಮ್ಮ ವಿಚಾರವೇ ಬೇರೆ ಸೋಮಶೇಖರ್ ನಾನು ಆತ್ಮಸಾಕ್ಷಿಗೆ ಮತ ಹಾಕಿದ್ದೇವೆ ಎಂದರು.

Key words: BJP, MLC Election, MLA, Shivaram Hebbar