ಜಿ.ಟಿ ದೇವೇಗೌಡರು ಜೆಡಿಎಸ್ ಗೆ ಮತ ಹಾಕಿದ್ದಾರೆ-  ಶಾಸಕ ಮಂಜುನಾಥ್ ಸ್ಪಷ್ಟನೆ

ಬೆಂಗಳೂರು,ಜೂನ್,18,2026 (www.justkannada.in):  ವಿಧಾನಸಭೆಯಿಂದ ವಿಧಾನ ಪರಿಷತ್ ಗೆ ಆಯ್ಕಯಾಗುವ 7 ಸ್ಥಾನಗಳಿಗೆ ಇಂದು ಚುನಾವಣೆ ನಡೆಯುತ್ತಿದ್ದು ಈ ನಡುವೆ ಜೆಡಿಎಸ್  ಶಾಸಕ ಜಿ.ಟಿ ದೇವೇಗೌಡರು ಕ್ರಾಸ್ ವೋಟಿಂಗ್ ಮಾಡಿರುವ ಬಗ್ಗೆ ಅನುಮಾನ ವ್ಯಕ್ತಪಡಿಸಿ ವರದಿಯಾದ ಬೆನ್ನಲ್ಲೆ ಈ ಬಗ್ಗೆ  ಜೆಡಿಎಸ್ ಶಾಸಕ ಮಂಜುನಾಥ್ ಸ್ಪಷ್ಟನೆ ನೀಡಿದ್ದಾರೆ.

ವಿಧಾನಸೌಧದಲ್ಲಿ ಇಂದು ಈ ಕುರಿತು ಮಾಧ್ಯಮಗಳ ಜೊತೆ ಹನೂರು ಶಾಸಕ ಮಂಜುನಾಥ್,  ಶಾಸಕ ಜಿ.ಟಿ ದೇವೇಗೌಡರು ನಮ್ಮ ಅಭ್ಯರ್ಥಿಗೆ ಜೆಡಿಎಸ್ ಗೆ ಮತ ಹಾಕಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.

ವರಿಷ್ಠೂ ಏನು ಹೇಳುತ್ತಾರೋ ಅದನ್ನ ನಾವು ಮಾಡುತ್ತೇವೆ. ನಮ್ಮ ಅಭ್ಯರ್ಥಿ ಗೆಲ್ಲುತ್ತಾರೆ ಎಂಬ ವಿಶ್ವಾಸವಿದೆ ಎಂದರು.  ಮತದಾನದ ಬಳಿಕ ಶಾಸಕ ಜಿಟಿ ದೇವೇಗೌಡರು ನಾನು ಆತ್ಮಸಾಕ್ಷಿಯ ಮತವನ್ನ ಹಾಕಿದ್ದೇನೆ ಎಂದಿದ್ದರು.

Key words: G.T. Deve Gowda, voted, JDS, MLA, Manjunath