ಮಣಿಪುರದಲ್ಲಿ ಜನರ ಹತ್ಯೆ  ಮೂಲಕ ಭಾರತಾಂಬೆಯ ಹತ್ಯೆಯಾಗಿದೆ-ಬಿಜೆಪಿ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ.

ನವದೆಹಲಿ.ಆಗಸ್ಟ್,9,2023(www.justkannada.in): ಮಣಿಪುರದಲ್ಲಿ ಬಿಜೆಪಿಯವರು ಹಿಂದೂಸ್ತಾನದ ಹತ್ಯೆ ಮಾಡಿದ್ದಾರೆ. ಮಣಿಪುರದಲ್ಲಿಜನರ ಹತ್ಯೆ  ಮೂಲಕ ಭಾರತಾಂಬೆಯ ಹತ್ಯೆಯಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ‍ಗಾಂಧಿ ವಾಗ್ದಾಳಿ ನಡೆಸಿದರು.

ಲೋಕಸಭೆಯಲ್ಲಿ ಅವಿಶ್ವಾಸ ನಿರ್ಣಯದ ಚರ್ಚೆಯಲ್ಲಿ ಮಾತನಾಡಿದ ರಾಹುಲ್ ಗಾಂಧಿ, ಬಿಜೆಪಿಯವರು ದೇಶಪ್ರೇಮಿಗಳಲ್ಲ ದೇಶದ್ರೋಹಿಗಳು. ಮಣಿಪುರದಲ್ಲಿ ಬಿಜೆಪಿಯವರು ಹಿಂದೂಸ್ತಾನದ ಹತ್ಯೆ ಮಾಡಿದ್ದಾರೆ  ಇದರರ್ಥ ಮಣಿಪುರದಲ್ಲಿಜನರ ಹತ್ಯೆ  ಮೂಲಕ ಭಾರತಾಂಬೆಯ ಹತ್ಯೆಯಾಗಿದೆ ಎಂದರು. ಈ ವೇಳೆ ರಾಹುಲ್ ಗಾಂಧಿ ಹೇಳಿಕೆಗೆ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ವ್ಯಕ್ತಪಡಿಸಿದ್ದು ಪರಸ್ಪರ ವಾಗ್ವಾದ ನಡೆಯಿತು. ಈ ವೇಳೆ ರಾಹುಲ್ ಗಾಂಧಿ ಕ್ಷಮೆ ಕೇಳುವಂತೆ ಬಿಜೆಪಿ ಸದಸ್ಯರು ಪಟ್ಟು ಹಿಡಿದರು.

ಇದಕ್ಕೂ ಮುನ್ನ ಮಾತು ಆರಂಭಿಸಿದ ರಾಹುಲ್ ಗಾಂಧಿ ಬಿಜೆಪಿ ಸ್ನೇಹಿತರಿಗೆ ಹೆದರುವ ಪ್ರಶ್ನೆಯೇ ಇಲ್ಲ ಸದನದಲ್ಲಿ ಇಂದು ಗೌತಮ್ ಅದಾನಿ ಬಗ್ಗೆ ಮಾತನಾಡಲ್ಲ ಬಿಜೆಪಿಯವರೇ ಹೆದರಬೇಡಿ . ನಾನು ಅದಾನಿ ಬಗ್ಗೆ ಮಾತನಾಡಲ್ಲ. ನೀವು ಇಂದು ಭಯಪಡುವ ಅಗತ್ಯವಿಲ್ಲ, ನನ್ನ ಭಾಷಣವು ಅದಾನಿ ವಿಷಯದ ಬಗ್ಗೆ ಅಲ್ಲ ಎಂದು ಹೇಳಿದರು.

ಭಾರತ್ ಜೋಡೋ ಯಾತ್ರೆ ಬಗ್ಗೆ ಮಾತನಾಡಿದ ಅವರು,  ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ  ಸಮುದ್ರ ಮಟ್ಟದಿಂದ ಕಾಶ್ಮೀರ ತುದಿವರೆಗೆ ಭಾರತ್ ಜೋಡೋ ಯಾತ್ರೆ ಮಾಡಿದ್ದೇನೆ. ಭಾರತ್ ಜೋಡೋ  ಉದ್ದೇಶವನ್ನ ಜನರು ಕೇಳುತ್ತಿದ್ದರು. ಜೋಡೋ ಪಾದಯಾತ್ರೆ ಇನ್ನೂ ಮುಕ್ತಾಯಗೊಂಡಿಲ್ಲ. ನಾನು ಯಾಕೆ ಯಾತ್ರೆ ಆರಂಭಿಸಿದೆ ಎಂಬುದು ನನಗೇ ಗೊತ್ತಿಲ್ಲ. ಆದರೆ ಆ ಪ್ರಯಾಣದಲ್ಲಿ  ಜನರ  ನೋವು, ಸಂಕಟ, ಸಮಸ್ಯೆಗಳು ನನ್ನದೇ ಸಮಸ್ಯೆಗಳಾದವು. ಯಾತ್ರೆಯ ವೇಳೆ ನನ್ನಲ್ಲಿದ್ದ ಅಹಂಕಾರದ ಭಾವನೆ ಮಾಯವಾಯಿತು. ಭಾರತ ಜನರ ಧ್ವನಿ. ಈ ಧ್ವನಿಗಳನ್ನು ಆಲಿಸಲು, ನಾವು ನಮ್ಮ ಆಸೆಗಳನ್ನು ತ್ಯಾಗ ಮಾಡಬೇಕು ಮತ್ತು ನಮ್ಮ ಅಹಂ ಮತ್ತು ದ್ವೇಷವನ್ನು ಬಿಟ್ಟುಬಿಡಬೇಕು ಎಂದು ರಾಹುಲ್ ಗಾಂಧಿ ಹೇಳಿದರು.

Key words: loksabha-congress –leader-Rahul Gandhi- Manipur- central government.