Sunday, September 20, 2026

BDA Apartments

ನಾಳೆ ದೆಹಲಿಗೆ ಸಿಎಂ ಬಿಎಸ್ ವೈ: ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ BDA JK_Adv BDA Adv
Home Front Page ನಾಳೆ ದೆಹಲಿಗೆ ಸಿಎಂ ಬಿಎಸ್ ವೈ: ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ.

ನಾಳೆ ದೆಹಲಿಗೆ ಸಿಎಂ ಬಿಎಸ್ ವೈ: ಪ್ರಧಾನಿ ಮೋದಿ ಭೇಟಿಗೆ ಸಮಯ ನಿಗದಿ.

ಬೆಂಗಳೂರು,ಜುಲೈ,15,2021(www.justkannada.in):  ನಾಳೆ ಮಧ್ಯಾಹ್ನ  ವಿಶೇಷ ವಿಮಾನದ ಮೂಲಕ ಸಿಎಂ  ಬಿಎಸ್ ಯಡಿಯೂರಪ್ಪ ದೆಹಲಿಗೆ ಪ್ರಯಾಣ ಬೆಳೆಸಲಿದ್ದು ಪ್ರಧಾನಿ ನರೇಂದ್ರ ಮೋದಿ ಅವರ ಭೇಟಿಗೆ ಸಮಯ ನಿಗದಿಯಾಗಿದೆ.jk

ನಾಳೆ ರಾಷ್ಟ್ರ ರಾಜಧಾನಿಗೆ ತೆರಳಲಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ನಾಳೆ ಸಂಜೆ 6.30ರಿಂದ 8 ಗಂಟೆಯ ಒಳಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾಗಲಿದ್ದಾರೆ. ಮೇಕೆದಾಟು ಯೋಜನೆ  (Mekedatu Project) ವಿಚಾರವಾಗಿ ಪ್ರಧಾನಿ ಜತೆ ಸಿಎಂ ಯಡಿಯೂರಪ್ಪ ಚರ್ಚೆ ನಡೆಸಲಿದ್ದಾರೆ ಎನ್ನಲಾಗಿದೆ.  ಸಿಎಂ ಬಿಎಸ್ ವೈ ಜತೆ ಡಿಸಿಎಂ ಗೋವಿಂದ ಕಾರಜೋಳ, ಗೃಹ ಸಚಿವ ಬಸವರಾಜ ಬೊಮ್ಮಾಯಿ ತೆರಳುವ ಸಾಧ್ಯತೆ ಇದೆ.

ಇನ್ನು ಜಲ ಸಂಪನ್ಮೂಲ ಇಲಾಖೆ ಅಧಿಕಾರಿಗಳು ಈಗಾಗಲೇ ದೆಹಲಿಗೆ ತೆರಳಿದ್ದು, ನಾಳೆ ಕೇಂದ್ರ ಜಲಶಕ್ತಿ ಇಲಾಖೆ ಸಚಿವರು, ಅಧಿಕಾರಿಗಳನ್ನು ರಾಜ್ಯದ ಅಧಿಕಾರಿಗಳು ಭೇಟಿಯಾಗಲಿದ್ದಾರೆ ಎಂದು ಹೇಳಲಾಗುತ್ತಿದೆ.

Key words: CM BS Yeddyurappa – Delhi- tomorrow-meet-PM Modi