ದೇಶದಲ್ಲಿ ಈಗ ಕ್ವಿಟ್ ಇಂಡಿಯಾ ಚಳುವಳಿ ಅಗತ್ಯ: ಅಂತಹ ಸಂದರ್ಭ ಮತ್ತೆ ಬಂದಿದೆ- ಡಿಸಿಎಂ ಡಿ.ಕೆ ಶಿವಕುಮಾರ್.

ಬೆಂಗಳೂರು,ಆಗಸ್ಟ್,9,2023(www.justkannada.in): ದೇಶದಲ್ಲಿ ಈಗ ಕ್ವಿಟ್ ಇಂಡಿಯಾ ಚಳುವಳಿ ಅಗತ್ಯವಿದೆ. ಅಂತಹ ಸಂದರ್ಭ ಇದೀಗ ನಮ್ಮ ದೇಶದಲ್ಲಿ ಮತ್ತೆ ಬಂದಿದೆ ಎಂದು ಡಿಸಿಎಂ ಡಿ.ಕೆ ಶಿವಕುಮಾರ್ ಹೇಳಿದರು.

ಇಂದು ಮಾತನಾಡಿದ ಡಿಸಿಎಂ ಡಿ.ಕೆ ಶಿವಕುಮಾರ್, ಅವತ್ತು ಬ್ರಿಟೀಷರ ವಿರುದ್ದ ಹೋರಾಡಿದ್ದವು ಇಂದು ಕೋಮುವಾದ, ಸರ್ವಾಧಿಕಾರದ ವಿರುದ್ದ ಹೋರಾಟ ಮಾಡಬೇಕಿದೆ. ಭಾರತವನ್ನ ರಕ್ಷಿಸಿ  ಅಂತಾ ಎಲ್ಲಾ ನಾಯಕರು ಸಭೆಗೆ ಬಂದಿದ್ದರು.  ವಿಪಕ್ಷಗಳ ಮೈತ್ರಿಕೂಟದ ನಾಯಕರು ಬೆಂಗಳೂರಿಗೆ ಬಂದಿದ್ದರು. ಎಐಸಿಸಿ ಸಭೆಯಲ್ಲಿ ಚರ್ಚಿಸಲು ಎಲ್ಲ ನಾಯಕರನ್ನ ಕರೆದಿದ್ದರು.

ಎಲ್ಲಾ ರಾಜ್ಯಗಳಲ್ಲಿ ನಾಯಕರು ಈಗ ಕರ್ನಾಟಕ ಮಾಡೆಲ್ ಫಾಲೋ ಮಾಡಿ ಅಂತಾ ಹೇಳುತ್ತಿದ್ದಾರೆ  ಎಂದು ಡಿ.ಕೆ ಶಿವಕುಮಾರ್ ಹೇಳಿದರು.

Key words: Quit India movement – needed – country now -DCM -DK Shivakumar