ಮನೆ ಖಾಲಿ ಮಾಡುವ ವೇಳೆ ಡ್ಯಾಮೇಜ್ ಆರೋಪ: ನಟ ಯಶ್ ವಿರುದ್ದ ಕಾನೂನು ಸಮರಕ್ಕೆ ಮುಂದಾದ್ರ ಮನೆ ಮಾಲೀಕ…

ಬೆಂಗಳೂರು,ಜೂ,8,2019(www.justkannada.in): ನಟ ರಾಕಿಂಗ್ ಸ್ಟಾರ್ ಯಶ್ ಗೆ ಮನೆ ಬಾಡಿಗೆ ವಿವಾದ ಬಗೆಹರಿದ ಬೆನ್ನಲ್ಲೆ ಇದೀಗ ನಟ ಯಶ್ ಗೆ ಮತ್ತೊಂದು ಸಂಕಷ್ಟ ಶುರುವಾಗಿದೆ. ಮನೆ ಖಾಲಿ ಮಾಡುವ ವೇಳೆ ವಸ್ತುಗಳನ್ನ ಡ್ಯಾಮೇಜ್ ಮಾಡಿದ್ದಾರೆಂದು ಮನೆ ಮಾಲೀಕ ಮುನಿಪ್ರಸಾದ್  ಆರೋಪಿಸಿದ್ದಾರೆ.

ರಾಕಿಂಗ್ ಸ್ಟಾರ್ ಯಶ್   ಬಾಡಿಗೆ ಮನೆ ವಿವಾದ ಬಗೆಹರಿದಿದ್ದು,  ರಾಕಿಂಗ್ ಸ್ಟಾರ್ ಯಶ್  ಮನೆ ಖಾಲಿ ಮಾಡಿ ಮನೆ ಮಾಲೀಕರಿಗೆ ಬಿಟ್ಟುಕೊಟ್ಟಿದ್ದರು. ಆದರೆ ಬಾಡಿಗೆ ಮನೆ ಖಾಲಿ ಮಾಡಿದರೂ ಸಹ ನಟ ಯಶ್ ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.

ಮನೆ ಖಾಲಿ ಮಾಡುವ ವೇಳೆ ಮನೆಯ ವಸ್ತುಗಳನ್ನ ಧ್ವಂಸಗೊಳಿಸಲಾಗಿದೆ.  ಮನೆಯಲ್ಲಿದ್ದ ವಸ್ತುಗಳನ್ನ ಹೊಡೆದು ಹಾಕಲಾಗಿದೆ. ವಾರ್ಡ್ ರೋಬ್ ಬಾಗಿಲು, ಕಿಚನ್ ವಸ್ತುಗಳು, ಫಾರಿನ್ ಕಮೋಡ್ ಎಲ್ಲವೂ ಡ್ಯಾಮೇಜ್ ಆಗಿದೆ. ಮನೆಯಲ್ಲಿದ್ದ ವಸ್ತುಗಳನ್ನ ನಾಶ ಮಾಡಿ, ವಾಸಕ್ಕೆ ಯೋಗ್ಯವಲ್ಲ ಎಂಬ ಸ್ಥಿತಿ ನಿರ್ಮಾಣವಾಗಿದೆ ಎಂದು ಆರೋಪಿಸಿರುವ ಮನೆ ಮಾಲೀಕ  ಯಶ್ ಕುಟುಂಬದ ವಿರುದ್ಧ ಕೇಸ್ ದಾಖಲಿಸಲು ಮುಂದಾಗಿದ್ದಾರೆ. ಮನೆ ಡ್ಯಾಮೇಜ್ ಗೆ 20 ಲಕ್ಷ ಪರಿಹಾರಕ್ಕಾಗಿ ದೂರು ನೀಡುವುದಾಗಿ ಮನೆ ಮಾಲೀಕ ತಿಳಿಸಿದ್ದಾರೆ ಎನ್ನಲಾಗಿದೆ.

Key words:  House Damage Accused. The owner of the house legal battle against the actor Yash