Tuesday, September 22, 2026

BDA Apartments

ಮೊಬೈಲ್ ಕ್ಯಾಂಟೀನ್ ಸಹಾಯಧನಕ್ಕೆ ಮಾ.13ರೊಳಗೆ ಅರ್ಜಿ ಸಲ್ಲಿಸಿ BDA JK_Adv BDA Adv
Home Front Page ಕಸ್ತೂರಿ ರಂಗನ್‌ ವರದಿ ಕುರಿತ ನಿರ್ಣಯ ಅಂಗೀಕಾರ: ಚರ್ಚೆಗೆ ಸಮಯ ಕೇಳ್ತೇನೆ ಎಂದ ಸಿಎಂ ಡಿಕೆಶಿ

ಕಸ್ತೂರಿ ರಂಗನ್‌ ವರದಿ ಕುರಿತ ನಿರ್ಣಯ ಅಂಗೀಕಾರ: ಚರ್ಚೆಗೆ ಸಮಯ ಕೇಳ್ತೇನೆ ಎಂದ ಸಿಎಂ ಡಿಕೆಶಿ

ಬೆಂಗಳೂರು,ಸೆಪ್ಟಂಬರ್‌,22,2026 (www.justkannada.in):ಕಸ್ತೂರಿರಂಗನ್ ವರದಿ ಕುರಿತು ಕೇಂದ್ರ ಸರ್ಕಾರ ಹೊರಡಿಸಿರುವ 7ನೇ ಕರಡು ಅಧಿಸೂಚನೆಯನ್ನು ಯಥಾವತ್ತಾಗಿ ಅಂಗೀಕರಿಸಲು ಸಾಧ್ಯವಿಲ್ಲ ಹಾಗೂ ಈ ಅಧಿಸೂಚನೆಯನ್ನು ತಕ್ಷಣವೇ ಮರುಪರಿಶೀಲಿಸಬೇಕು ಎಂದು ರಾಜ್ಯ ಸರ್ಕಾರ ಆಗ್ರಹಿಸಿದ್ದು ಈ ಸಂಬಂಧ ವಿಧಾನಸಭೆಯಲ್ಲಿ ಇಂದು ವರದಿ ಕುರಿತ ನಿರ್ಣಯವನ್ನ ಅಂಗೀಕಾರ ಮಾಡಿದೆ.

ಪಶ್ಚಿಮ ಘಟ್ಟಗಳ ರಕ್ಷಣೆ ಮತ್ತು ಸ್ಥಳೀಯ ಜನರ ಹಿತಾಸಕ್ತಿಯ ಕುರಿತು ವಿಧಾನಸಭೆಯಲ್ಲಿ ನಡೆದ ಸುದೀರ್ಘ ಚರ್ಚೆಯ ಬಳಿಕ, ಕರಡು ಅಧಿಸೂಚನೆಯನ್ನು ಮರುಪರಿಶೀಲಿಸುವಂತೆ ಒತ್ತಾಯಿಸುವ ಸರ್ವಾನುಮತದ ನಿರ್ಣಯವನ್ನು ವಿಧಾನಸಭೆಯಲ್ಲಿ ಅಂಗೀಕರಿಸಲಾಯಿತು.

ವರದಿಯಲ್ಲಿರುವ ಹಲವು ನ್ಯೂನ್ಯತೆಗಳು ಹಾಗೂ ಗೊಂದಲಗಳನ್ನು ಸರಿಪಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಇದಕ್ಕಾಗಿ ನಿವೃತ್ತ ನ್ಯಾಯಾಧೀಶರ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಮಿತಿಯೊಂದನ್ನು ರಚಿಸಲಾಗುವುದು ಎಂದು ತಿಳಿಸಲಾಗಿದೆ.

ಈ ಕುರಿತು ವಿಧಾನಸಭೆಯಲ್ಲಿ ಮಾತನಾಡಿದ ಸಿಎಂ ಡಿಕೆ ಶಿವಕುಮಾರ್‌, ಕಸ್ತೂರಿ ರಂಗನ್‌ ವರದಿ ಬಗ್ಗೆ ಚರ್ಚೆಗೆ ಸಮಯ ಕೇಳುತ್ತೇನೆ. ಶೀಘ್ರದಲ್ಲೇ ದೆಹಲಿಯವರಿಗೆ ಸಮಯ ಕೇಳುತ್ತೇನೆ. ಸಮಯ ಸಿಕ್ಕಿದ ಕೂಡಲೇ ದೆಹಲಿಗೆ ತೆರಳೋಣ ಎಂದು ಸರ್ವಪಕ್ಷ ನಿಯೋಗ ತೆರಳುವ ಬಗ್ಗೆ ಹೇಳಿಕೆ ನೀಡಿದರು.Kasturirangan Report jk02

 

English Summary
Title

Karnataka Assembly Rejects Kasturirangan Report on Western Ghats ESAs

Short Description
The Karnataka Legislative Assembly's special session on the Dr. K. Kasturirangan Report highlights the state's fierce opposition to the Centre's 7th draft notification on Ecologically Sensitive Areas (ESAs) in the Western Ghats. Karnataka Chief Minister D.K. Shivakumar warned that the report threatens the livelihoods of people across 10 districts, causing widespread anxiety among farmers. The government plans to pass an official resolution and lead an all-party delegation to the Centre before the September 27, 2026 deadline. Shivakumar collected direct feedback from the Malnad region to ensure a unified stance protecting local farmers while maintaining environmental balance.
Keywords
Kasturirangan Report, Session, CM, DK Shivakumar, Discussion