Wednesday, September 23, 2026

BDA Apartments

Home Front Page KPSC ಮುಚ್ಚುವ ಬಗ್ಗೆ ಚಿಂತನೆ: ಹಗರಣದ‌ ತನಿಖಾಧಿಕಾರಿಗಳ ನೇಮಕದ‌‌ ಸ್ವಾತಂತ್ರ್ಯ ನಮಗೆ ಕೊಡಬೇಕಿತ್ತು-ಸಿಎಂ ಡಿಕೆ ಶಿವಕುಮಾರ್‌

KPSC ಮುಚ್ಚುವ ಬಗ್ಗೆ ಚಿಂತನೆ: ಹಗರಣದ‌ ತನಿಖಾಧಿಕಾರಿಗಳ ನೇಮಕದ‌‌ ಸ್ವಾತಂತ್ರ್ಯ ನಮಗೆ ಕೊಡಬೇಕಿತ್ತು-ಸಿಎಂ ಡಿಕೆ ಶಿವಕುಮಾರ್‌

ಬೆಂಗಳೂರು ಸೆಪ್ಟಂಬರ್,22,2026 (www.justkannada.in) “ಕೆಪಿಎಸ್ ಸಿಯಲ್ಲಿ ಹಗರಣಗಳು ಹೆಚ್ಚಿವೆ. ಇದನ್ನು ಕಾನೂನು ಚೌಕಟ್ಟಿನಲ್ಲಿ ಮುಚ್ಚುವ ಬಗ್ಗೆ ತಜ್ಞರ ಜೊತೆ ಚರ್ಚೆ ಮಾಡುತ್ತಿದ್ದೇನೆ” ಎಂದು ಸಿಎಂ ಡಿ ಕೆ ಶಿವಕುಮಾರ್ ಅವರು ಹೇಳಿದರು.

ಮಂಗಳವಾರ ನಡೆದ ಕಿಯೋನಿಕ್ಸ್‌ನ 50ನೇ ಸಂಸ್ಥಾಪನಾ ದಿನಾಚರಣೆ ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯೆ ‌ನೀಡಿದರು.

“ಕೆಪಿಎಸ್ ಸಿಯಲ್ಲಿ ಖದೀಮರು ಸೇರಿಕೊಂಡಿದ್ದಾರೆ. ನಾವು ನಂಬಿಕೆ ಇಟ್ಟು ಆಯ್ಕೆ ಮಾಡಿದ ಅಧಿಕಾರಗಳು ಹೀಗೆಲ್ಲಾ ಮಾಡುತ್ತಿದ್ದಾರೆ. ಅಲ್ಲಿರುವ ಸದಸ್ಯರು ಅಂಗಡಿಯನ್ನೇ ತೆರೆದಿದ್ದಾರೆ. ನಮ್ಮ ಪೊಲೀಸ್ ಅಧಿಕಾರಿಗಳು ದಾಖಲೆಗಳನ್ನು ಸಂಗ್ರಹಿಸಿದ್ದಾರೆ. ಒಂದು ದಿನ ಎಲ್ಲವೂ ಹೊರಗೆ ಬರುತ್ತದೆ” ಎಂದರು.

ಕೆಪಿಎಸ್‌ ಸಿ ಹಗರಣ; ತನಿಖಾಧಿಕಾರಿಗಳ ನೇಮಕದ‌‌ ಸ್ವಾತಂತ್ರ್ಯ ನಮಗೆ ಕೊಡಬೇಕಿತ್ತು

“ಹೈಕೋರ್ಟ್ ಎಸ್ ಐಟಿ ರಚನೆಗೆ ನಿರ್ದೇಶನ ನೀಡಿರುವುದನ್ನು ಸ್ವಾಗತಿಸುತ್ತೇನೆ. ಇಡಿ ಕೂಡ ತನಿಖೆ ಮಾಡುತ್ತಿದೆ. ಆದರೆ, ನಮ್ಮ ಪೊಲೀಸ್ ಇಲಾಖೆಯೂ ತನಿಖೆಯನ್ನು ಬಹಳ ಚೆನ್ನಾಗಿ ನಡೆಸುತ್ತಿದೆ. ನ್ಯಾಯಾಲಯ ಅಗತ್ಯವಿದ್ದರೆ ನಮ್ಮ ಪೊಲೀಸ್ ಇಲಾಖೆಯ ತನಿಖೆಯ ವೈಖರಿಯ ಉಸ್ತುವಾರಿ ನೋಡಬಹುದಿತ್ತು. ನ್ಯಾಯಾಲಯ ಎಸ್ ಐಟಿ ತನಿಖೆಗೆ ನಿರ್ದೇಶಿಸಿರುವುದು  ಸರಿ. ಆದರೆ, ತನಿಖಾಧಿಕಾರಿಗಳ ನೇಮಕದ ಸ್ವಾತಂತ್ರ್ಯವನ್ನು ರಾಜ್ಯಸರ್ಕಾರಕ್ಕೆ ಕೊಡಬೇಕಿತ್ತು. ಈ ಬಗ್ಗೆ ದೆಹಲಿ, ಬೇರೆ ಬೇರೆ ರಾಜ್ಯಗಳಿಂದ ನಮಗೆ ಕರೆ ಬಂದಿತ್ತು. ಈ ಬಗ್ಗೆ ಕಾನೂನು ತಜ್ಞರ ಅಭಿಪ್ರಾಯ ಪಡೆಯುತ್ತೇನೆ” ಎಂದು ಹೇಳಿದರು.

“ನಮಗೆ ಮಕ್ಕಳ ಭವಿಷ್ಯ ಮುಖ್ಯ. ಇದೇ ಕಾರಣಕ್ಕೆ ಸಿದ್ದರಾಮಯ್ಯನವರು ತಮ್ಮ ಅವಧಿಯಲ್ಲಿ  ಕೆಪಿಎಸ್ ಸಿಯಲ್ಲಿದ್ದ ಸದಸ್ಯರ ಸಂಖ್ಯೆಯನ್ನು ಕಡಿತಗೊಳಿಸಿದ್ದರು. ನಾವು ನಂಬಿಕೆ ಇಟ್ಟು, ಪಾರದರ್ಶಕವಾಗಿ ಆಯ್ಕೆ ಮಾಡಿ ಅಧಿಕಾರಿಗಳನ್ನು ಕಳುಹಿಸಿದರೆ ಅವರೂ ಹೀಗೆ ಮಾಡುತ್ತಾರೆ” ಎಂದರು.

“ನಾನು ಇಂಧನ ಸಚಿವನಾಗಿದ್ದಾಗ 22 ಸಾವಿರ ಮಂದಿ ಲೈನ್ ಮ್ಯಾನ್,  ಎಂಜಿನಿಯರ್ ಗಳ ಹುದ್ದೆ ತುಂಬಿದ್ದೇನೆ. ಬಹಳ ಜಾಗೃತನಾಗಿ ಈ ಕೆಲಸ ಮಾಡಿದ್ದೇನೆ. ಅದಕ್ಕೂ ಮೊದಲು ಖಾಲಿ ಪೇಪರ್ ನಲ್ಲಿ ಬರೆಸುವ ಭ್ರಷ್ಟ ಸಂಪ್ರದಾಯ ಇತ್ತು. ಆದರೆ ನಾನು ಅದಕ್ಕೆಲ್ಲಾ ಅವಕಾಶ ಕೊಡಲಿಲ್ಲ” ಎಂದು ಹೇಳಿದರು.

ಎಚ್ ಕೆ ಪಾಟೀಲರು ಗದಗವನ್ನು ಬರದ ಜಿಲ್ಲೆ ಎಂದು ಘೋಷಣೆ ಮಾಡದೇ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಡುತ್ತೇನೆ ಎಂಬ ಹೇಳಿಕೆ ಬಗ್ಗೆ ಕೇಳಿದಾಗ, “ಗದಗ ಜಿಲ್ಲೆಯ ಪ್ರವಾಸ ಮಾಡಿದ್ದೇನೆ. ನನ್ನ ಜೊತೆ ಪಾಟೀಲರು ಇದ್ದರು. ಅವರು ಹೇಳಿದ್ದು ಸತ್ಯ. ಮಲೆನಾಡಿನಲ್ಲೇ ಬರ ಬಂದಿದೆ ಎಂದರೆ, ಗದಗದಲ್ಲಿ ಬರ ಇರುವುದಿಲ್ಲವೇ, ಜಿಲ್ಲೆಯ ಸಮಸ್ಯೆಯ ಅರಿವು ನನಗಿದೆ. ಈಗಾಗಲೇ 124 ತಾಲೂಕುಗಳು ಬರ ಘೋಷಣೆಯಾಗಿದೆ. 200 ತಾಲೂಕು ಘೋಷಣೆಯಾಗುವ ಸಾಧ್ಯ ಇದೆ. ಈ ಬಗ್ಗೆ ಅಗತ್ಯ ವರದಿಗಳು ಬರುತ್ತಿವೆ” ಎಂದರು.KPSC ಮುಚ್ಚುವ ಬಗ್ಗೆ ಚಿಂತನೆ: ಹಗರಣದ‌ ತನಿಖಾಧಿಕಾರಿಗಳ ನೇಮಕದ‌‌ ಸ್ವಾತಂತ್ರ್ಯ...

“ವಿರೋಧ ಪಕ್ಷಗಳು 10ದಿನ ಅಧಿವೇಶನದ ಸಮಯ ವ್ಯರ್ಥ ಮಾಡಿದರು. ಅವರಿಗೆ ಸಮಯದ ಬೆಲೆ ತಿಳಿದಿಲ್ಲ. ರಾಜಕಾರಣ ಮಾಡುವುದು ಮಾತ್ರ ಅವರಿಗೆ ಗೊತ್ತು.  ನಾನು ಕ್ಯಾಬಿನೆಟ್ ಸಭೆ ಕರೆದು ತೀರ್ಮಾನ ಮಾಡಬಹುದಿತ್ತು. ಆದರೆ ಹಾಗೆ ಮಾಡಲಿಲ್ಲ. ನಾಡಿನ ಜನರ ಸಮಸ್ಯೆ ಏನು ಅಂತ ತಿಳಿಯಬೇಕಿತ್ತು.  ಸರ್ಕಾರ ಜನರ ದನಿಯಾಗಬೇಕು. ಜನರ ಮಾತಿಗೆ, ಅವರ ಬಾವನೆ  ಬೆಲೆ ಕೊಡಬೇಕು ಅಂತ ವಿಶೇಷ ಅಧಿವೇಶನ ಆಯೋಜಿಸಿ ಚರ್ಚೆಗೆ ಕರೆದಿದ್ದೇನೆ” ಎಂದರು.

“ನಾನು ರೈತರು, ಜನರ ಜೊತೆ ಮಾತನಾಡಿದ್ದೇನೆ. ಪ್ರವಾಸ ಮಾಡಿದ್ದೇನೆ. ಪರಿಸ್ಥಿತಿಯನ್ನು ಅರ್ಥ ಮಾಡಿಕೊಂಡಿದ್ದೇನೆ. ಆಗ ಸಮಯ ವ್ಯರ್ಥ ಮಾಡಿ ಈಗ ಹೆಚ್ಚಿಗೆ ಸಮಯ ಬೇಕು ಅಂದರೆ ಹೇಗೆ, ವಿರೋಧ ಪಕ್ಷಗಳಿಗೆ ರಾಜಕೀಯ ಮುಖ್ಯ. ನಮಗೆ ಅಭಿವೃದ್ಧಿ ಮುಖ್ಯ, ರೈತರ ಸಮಸ್ಯೆ ಮುಖ್ಯ. ಜನರ ಹಸಿವು ನೀಗಿಸುವುದು ಮುಖ್ಯ” ಎಂದು ಹೇಳಿದರು.  KPSC ಮುಚ್ಚುವ ಬಗ್ಗೆ ಚಿಂತನೆ dks dks 9

ಸಾಲ ಜಾಸ್ತಿಯಾಗಿರುವುದರಿಂದ ಹೊಸ ಯೋಜನೆ ಘೋಷಣೆ ಮಾಡಲಿಕ್ಕೆ ಆಗುತ್ತಿಲ್ಲ. ಆರ್ಥಿಕ ಇಲಾಖೆ ಈ ಬಗ್ಗೆ ಸರ್ಕಾರಕ್ಕೆ ಪತ್ರ ಬರೆದಿದೆ ಎಂಬ ಪ್ರಶ್ನೆಗೆ,‌ “ಸರ್ಕಾರದ ಹಿತಕ್ಕಾಗಿ ಸಲಹೆ ನೀಡಿದೆ.  ಹಣಕಾಸು ಸಚಿವನಾಗಿ ನನಗೆ ಯಾವ ಯೋಜನೆಯನ್ನು ನಿಲ್ಲಿಸಬೇಕು, ಯಾವ ಯೋಜನೆ ಸೇರಿಸಬೇಕು ಎನ್ನುವುದು ತಿಳಿದಿದೆ. ಎಲ್ಲಾ ಬೆಲೆಗಳು ಗಗನಕ್ಕೆ ಏರಿಕೆಯಾಗಿವೆ, ಜನರ ಆದಾಯಕುಸಿದು ಹೋಗಿದೆ.  ಹಾಗಾಗಿ 5 ಗ್ಯಾರಂಟಿಗಳನ್ನು ಕೊಟ್ಟಿದ್ದೇವೆ. ರೈತರು, ಜನರ ಬದುಕಿಗೆ ನೆರವಾಗುತ್ತಿದ್ದೇವೆ. ಈ ಮಧ್ಯೆ ಕರ್ನಾಟಕ ಅಭಿವೃದ್ಧಿಯಲ್ಲಿ ಮುಂದಿದೆ” ಎಂದು ಹೇಳಿದರು.

“ನಾವು ಅಧಿಕಾರದಲ್ಲಿ ಇದ್ದೇವೆ. ಹೀಗಾಗಿ ಏನು ಮಾಡಬೇಕು ಎನ್ನುವ ಅರಿವು ನಮಗಿದೆ. ಕೇಂದ್ರ ಸರ್ಕಾರ ತನ್ನದೇ ಆದ ಯೋಚನೆಗಳನ್ನು ಮಾಡುತ್ತಿದೆ. ಕೇವಲ ಮಾತನಾಡುವುದಲ್ಲ. ಕೇಂದ್ರ ಸರ್ಕಾರ ರಾಜ್ಯಸರ್ಕಾರಕ್ಕೆ ಕೊಡಬೇಕಾದ ಅನುದಾನವನ್ನು ಮೊದಲಿ ನೀಡಲಿ. ಈ ಹಿಂದೆ ಪ್ರಧಾನಿ ನರೇಂದ್ರ ಮೋದಿ, ನಿರ್ಮಲಾಸೀತಾರಾಮನ್ ಹಾಗೂ ಬಸವರಾಜ ಬೊಮಾಮಾಯಿ ಅವರು ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಘೋಷಣೆ ಮಾಡಿದರು. ಮೊದಲು ಅದನ್ನು ಕೊಡಿ” ಎಂದರು.

ನಾನು ಮುಖ್ಯಮಂತ್ರಿಯಾಗಿದ್ದಾಗ ಪ್ರಧಾನಿಗಳಿಗೆ ಸಾಲ ಮನ್ನಾ ಮಾಡಿ ಎಂದು ಕೇಳಿಲ್ಲ ಅಂತ ಕುಮಾರಸ್ವಾಮಿ ಅವರ ಹೇಳಿಕೆ ಬಗ್ಗೆ ಕೇಳಿದಾಗ, “ಸಾಲ ಮನ್ನಾ ಮಾಡಿದ್ದು ನಮ್ಮ,  ರಾಹುಲ್ ಗಾಂಧಿ ಅವರ ಬದ್ಧತೆ. ಕುಮಾರಸ್ವಾಮಿ ಅವರ ಬದ್ಧತೆಯಲ್ಲ. ಅದು ನಮ್ಮ ಚಿಂತನೆ, ಕುಮಾರಸ್ವಾಮಿ ಅವರದ್ದಲ್ಲ.  ನಾವು ಬೆಂಬಲ ಕೊಟ್ಟಿದ್ದಕ್ಕೆ ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದು. ಬಿಜೆಪಿ ಅವರನ್ನು ದೂರ ಇಡಲು ನಾವು ಬೆಂಬಲ ಕೊಟ್ಟಿದ್ದು. ಆ ಸರ್ಕಾರಕ್ಕೆ ಅಡಿಪಾಯ ಹಾಕಿದ್ದು ನಾವು” ಎಂದರು.ಹಗರಣದ‌ ತನಿಖಾಧಿಕಾರಿಗಳ ನೇಮಕದ‌‌ ಸ್ವಾತಂತ್ರ್ಯ ನಮಗೆ ಕೊಡಬೇಕಿತ್ತು jk02

ಸೌಜನ್ಯ ಪ್ರಕರಣ ಮರುತನಿಖೆ ಬಗ್ಗೆ ಕೇಳಿದಾಗ, “ಸೌಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿ ಪಡೆಯುತ್ತೇನೆ. ತನಿಖೆಗೆ ಯಾರೂ ಹಸ್ತಕ್ಷೇಪ ಮಾಡುವುದಿಲ್ಲ. ಕಾನೂನು ಪ್ರಕಾರ ಎಲ್ಲವೂ ನಡೆಯುತ್ತದೆ” ಎಂದರು.

shutting down, KPSC, freedom,   investigating, scandal, CM DK Shivakumar.