Tuesday, September 22, 2026

BDA Apartments

Home Front Page ಖ್ಯಾತ ಸಂಗೀತ ಕಲಾವಿದ ಪಂ. ಇಂಧೂಧರ್ ನಿರೋಡಿ ನಿಧನ

ಖ್ಯಾತ ಸಂಗೀತ ಕಲಾವಿದ ಪಂ. ಇಂಧೂಧರ್ ನಿರೋಡಿ ನಿಧನ

ಮೈಸೂರು,ಸೆಪ್ಟಂಬರ್‌,22,2026 (www.justkannada.in):  ಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ, ಸಂಗೀತ ತಜ್ಞ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಪಂಡಿತ್ ಇಂಧೂಧರ್ ನಿರೋಡಿ ಅವರು ಮುಂಬೈನಲ್ಲಿ ನಿಧನರಾಗಿದ್ದಾರೆ.

ಮೈಸೂರಿನ ಸರಸ್ವತಿಪುರಂ ನಿವಾಸಿಯಾಗಿದ್ದ ಪಂ. ಇಂಧೂಧರ್ ನಿರೋಡಿ, ಆಗ್ರಾ ಘರಾಣೆಯ ಹಿರಿಯ ಹಾಗೂ ಪ್ರಖ್ಯಾತ ಹಿಂದುಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿ ಗುರುತಿಸಿಕೊಂಡಿದ್ದರು. ತಮ್ಮ ವಿಶಿಷ್ಟ ಗಾಯನ ಶೈಲಿ, ಸಂಗೀತ ಜ್ಞಾನ ಹಾಗೂ ದೀರ್ಘಕಾಲದ ಕಲಾಸೇವೆಯ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.Renowned musician nirody-indudar nirody indudar

ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಮುಂದುವರಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದ ಅವರು, ಸಂಗೀತ ಕ್ಷೇತ್ರದಲ್ಲಿನ ಅಪಾರ ಸೇವೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಗೆ ಭಾಜನರಾಗಿದ್ದರು.

ಮೈಸೂರಿನೊಂದಿಗೆ ವಿಶೇಷ ನಂಟು ಹೊಂದಿದ್ದ ಪಂ. ಇಂಧೂಧರ್ ನಿರೋಡಿ ಅವರ ನಿಧನದಿಂದ ಸಂಗೀತ ಲೋಕಕ್ಕೆ, ವಿಶೇಷವಾಗಿ ಮೈಸೂರಿನ ಕಲಾ ಮತ್ತು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಅಗಲಿಕೆಗೆ ಸಂಗೀತಾಸಕ್ತರು ಹಾಗೂ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.Renowned musician jk02

 

English Summary
Title

Legendary Hindustani Vocalist Pt. Indudhar Nirody Passes Away | Agra Gharana Icon

Short Description
Pandit Indudhar Nirody, the legendary Agra Gharana Hindustani classical vocalist, passed away, leaving a monumental legacy in Indian music. Born in 1935 in Udupi, he was revered for his powerful voice and strict adherence to musical traditions. Beyond his soulful performances, Pt. Nirody made history by recording 1,896 legacy bandishes for the "Samarpan" project, documenting the foundational works of Pt. Vishnu Narayan Bhatkhande. A Top-Grade All India Radio artist and recipient of the prestigious Sangeet Natak Akademi Award, he dedicated his life to teaching and preserving classical art. His demise marks the end of an era for Hindustani music.
Keywords
Renowned musician, Pt. Indhudhar Nirody, passes away.