ದಸರೆ ಫಲಪುಷ್ಪ ಪ್ರದರ್ಶನ: ಕುಪ್ಪಣ್ಣ ಪಾರ್ಕ್’ನಲ್ಲಿ ಜಯಚಾಮರಾಜ ಒಡೆಯರ್‌ ನೋಡಬನ್ನಿ…

ಮೈಸೂರು, ಸೆಪ್ಟೆಂಬರ್ 29, 2019 (www.justkannada.in):ನಗರದ ಕುಪ್ಪಣ್ಣ ಪಾರ್ಕ್‌ನಲ್ಲಿ ಇಂದಿನಿಂದ ಅ.9ರವರೆಗೆ 11 ದಿನ ಫಲಪುಷ್ಪ ಪ್ರದರ್ಶನ ನಡೆಯಲಿದೆ.

ಹೂವುಗಳ ತಾಜಾತನ ಕಾಪಾಡಿಕೊಳ್ಳಲಿಕ್ಕಾಗಿ ಈ ಬಾರಿ ಪ್ರತಿ ನಾಲ್ಕು ದಿನಕ್ಕೊಮ್ಮೆ ಹೂವು ಬದಲಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಜಯಚಾಮರಾಜ ಒಡೆಯರ್‌ ಜನ್ಮಶತಮಾನೋತ್ಸವದ ನೆನಪಿನಲ್ಲಿ ಗ್ಲಾಸ್‌ ಹೌಸ್‌ನಲ್ಲಿ ಒಡೆಯರ್‌ ಪ್ರತಿಕೃತಿ ನಿರ್ಮಿಸಲಾಗುತ್ತಿದೆ.

ಇದಕ್ಕೆ 4.5ಲಕ್ಷದಿಂದ 5 ಲಕ್ಷ ಹೂವು ಬೇಕಿದೆ. ಪ್ರತಿಮೆಯ ಸುತ್ತಲೂ ಒಡೆಯರ್ ತಮ್ಮ ಆಡಳಿತದಲ್ಲಿ ಮೈಸೂರಿಗೆ ನೀಡಿದ ಕೊಡುಗೆಗಳನ್ನು ಸ್ಮರಿಸುವ 100 ಫ್ಲೆಕ್ಸ್‌ ಅಳವಡಿಸಲಾಗಿದೆ.

ಇದೇ ಆವರಣದಲ್ಲಿ ಸಿಂಹಾಸನ, ಆನೆಯ ಹೂವಿನ ಪ್ರತಿಕೃತಿಗಳು ಇರಲಿವೆ. ಇದರ ಜತೆಯಲ್ಲೇ ಜಯಚಾಮರಾಜ ಒಡೆಯರ್‌ ಆಳ್ವಿಕೆಯಲ್ಲಿ ನಿರ್ಮಾಣಗೊಂಡ 20ಕ್ಕೂ ಹೆಚ್ಚು ಸ್ಮಾರಕಗಳನ್ನು ರೂಪಿಸಿ, ಪ್ರದರ್ಶನಕ್ಕಿಡಲಾಗುವುದು.