Thursday, October 8, 2026

BDA Apartments

Home Front Page ಎರಡುವರೆ ವರ್ಷದ ಬಳಿಕ ಕ್ಯಾಬಿನೆಟ್ ಬದಲಾವಣೆ: ಎಲ್ಲಾ ಸಚಿವರಿಗೆ ಅಂದು ರಾಜೀನಾಮೆಗೆ ಸೂಚನೆ-ಹೊಸಬಾಂಬ್ ಸಿಡಿಸಿದ ಕಾಂಗ್ರೆಸ್...

ಎರಡುವರೆ ವರ್ಷದ ಬಳಿಕ ಕ್ಯಾಬಿನೆಟ್ ಬದಲಾವಣೆ: ಎಲ್ಲಾ ಸಚಿವರಿಗೆ ಅಂದು ರಾಜೀನಾಮೆಗೆ ಸೂಚನೆ-ಹೊಸಬಾಂಬ್ ಸಿಡಿಸಿದ ಕಾಂಗ್ರೆಸ್ ಶಾಸಕ.  

ಬೆಂಗಳೂರು,ಅಕ್ಟೋಬರ್,20,2023(www.justkannada.in): ಎರಡುವರೆ ವರ್ಷದ ಬಳಿಕ  ಸಚಿವ ಸಂಪುಟ ಬದಲಾವಣೆಯಾಗಲಿದೆ.  ಎಲ್ಲಾ ಸಚಿವರಿಗೆ ರಾಜೀನಾಮೆಗೆ ನೀಡುವಂತೆ  ಸೂಚನೆ ರಣದೀಪ್ ಸಿಂಗ್ ಸುರ್ಜೇವಾಲ ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಶಾಸಕ ಅಶೋಕ್ ಪಟ್ಟಣ್ ಹೊಸ ಬಾಂಬ್ ಸಿಡಿಸಿದ್ದಾರೆ.

ಇಂದು ವಿಧಾನಸೌಧದಲ್ಲಿ ಮಾತನಾಡಿದ ಸರ್ಕಾರದ ಮುಖ್ಯ ಸಚೇತಕ ಅಶೋಕ್ ಪಟ್ಟಣ್, ಎರಡುವರೆ ವರ್ಷ ಆದ ಮೇಲೆ ಎಲ್ಲಾ ಸಚಿವರಿಗೂ ರಾಜೀನಾಮೆ ನೀಡಲು ಸುರ್ಜೇವಾಲ ಹೇಳಿದ್ದಾರೆ. 2.5 ವರ್ಷದ ಬಳಿಕ ಕ್ಯಾಬಿನೆಟ್ ಬದಲಾವಣೆ ಆಗಲಿದೆ. ಎರಡುವರೆ ವರ್ಷದ ಬಳಿಕ ಕ್ಯಾಬಿನೆಟ್ ಬದಲಾವಣೆ: ಎಲ್ಲಾ ಸಚಿವರಿಗೆ ಅಂದು ರಾಜೀನಾ...

ನಾನು ಹಿರಿಯ ಶಾಸಕ ಮಂತ್ರಿ ಆಗಬೇಕಿತ್ತು ಎರಡುವರೆ ವರ್ಷದ ಬಳಿಕ ಮಂತ್ರಿ ಮಾಡೋದಾಗಿ ಹೇಳಿದ್ದಾರೆ.  ಜಾತಿ ನೋಡಿ ಸಚಿವ ಸ್ಥಾನ ನೀಡಲಾಗಿದೆ, ಹೀಗಾಗಿ ನನಗೆ ಸಿಕ್ಕಿಲ್ಲ. ಅನುಭವ ನೋಡಿ ಮಂತ್ರಿ ಮಾಡಿ ಎಂದು ನಾನು ಮನವಿ ಮಾಡಿದ್ದೇನೆ. ಎರಡೂವರ್ಷದ ಬಳಿಕ ಸಚಿವ ಸ್ಥಾನ ಕೊಡುತ್ತಾರೆ ಎನ್ನುವ ನಂಬಿಕೆ ಇದೆ. ಸಚಿವ ಸ್ಥಾನ ಕೊಟ್ಟರೂ ಪಕ್ಷದಲ್ಲೇ ಇರುತ್ತೇನೆ, ಕೊಡದಿದ್ದರೂ ಇರುವೆ. ಪುನರ್ ರಚನೆ ಮಾಡುತ್ತಾರೋ ಅಥವಾ ನಾಲ್ಕೈದು ಸ್ಥಾನ ಬದಲಾವಣೆನೋ ಗೊತ್ತಿಲ್ಲ. ಸಿಎಂ ಸ್ಥಾನದ ಬಗ್ಗೆ ನಮ್ಮ ಹೈಕಮಾಂಡ್ ತೀರ್ಮಾನ ಮಾಡುತ್ತದೆ ಎಂದು ಅಶೋಕ್ ಪಟ್ಟಣ್ ಹೇಳಿದರು.

Key words: Cabinet- change- after -two-and-a-half years-Congress -MLA