Friday, September 18, 2026

BDA Apartments

Home Front Page ಮೈಸೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಅಗ್ನಿ ಅವಘಡ : ಅಬಕಾರಿ ಅಧಿಕಾರಿಗಳು ಸಸ್ಪೆಂಡ್

ಮೈಸೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಅಗ್ನಿ ಅವಘಡ : ಅಬಕಾರಿ ಅಧಿಕಾರಿಗಳು ಸಸ್ಪೆಂಡ್

ಮೈಸೂರು,ಜೂನ್,17,2026 (www.justkannada.in): ಮೈಸೂರು ನಗರದ ದಟ್ಟಗಳ್ಳಿ ಸಮೀಪದ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಆದ ಅಗ್ನಿ ಅವಘಡದ ಸಂಬಂಧ ಕರ್ತವ್ಯ ಲೋಪವೆಸಗಿದ ಅಬಕಾರಿ ಅಧಿಕಾರಿಗಳನ್ನು  ಅಮಾನತು ಮಾಡಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.

ಸದರಿ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಕಟ್ಟಡದ ರೂಪ್ ಟಾಪ್ ನಲ್ಲಿ ಅನುಮತಿ ಪಡೆಯದೆ ಒಣ ಹುಲ್ಲು ಮತ್ತು ಗರಿಗಳಿಂದ ನಿರ್ಮಿಸಿ ಬಾರ್ ಅಂಡ್ ರೆಸ್ಟೋರೆಂಟ್ ನಡೆಸುತ್ತಿದ್ದು, ಈ ಸಂಬಂಧ ಪರಿಶೀಲಿಸದೆ ಕರ್ತವ್ಯ ಲೋಪವೆಸಗಲಾಗಿದೆ ಎಂದು ಅಬಕಾರಿ ಆಯುಕ್ತರು ಅಮಾನತು ಮಾಡಿದ್ದಾರೆ.ಮೈಸೂರಿನಲ್ಲಿ ಬಾರ್ ಅಂಡ್ ರೆಸ್ಟೋರೆಂಟ್ ಅಗ್ನಿ ಅವಘಡ BDA JK_Adv BDA Adv

ಮೈಸೂರು ಉಪವಿಭಾಗದ ಅಬಕಾರಿ ಉಪ ಅಧೀಕ್ಷಕರು ಹಾಗೂ ಮೈಸೂರು ವಲಯ-3 ರ ಅಬಕಾರಿ ನಿರೀಕ್ಷಕರು, ಅಬಕಾರಿ ಉಪನಿರೀಕ್ಷಕರು-1, ಅಬಕಾರಿ ಉಪನಿರೀಕ್ಷಕರು-2,  ಹಾಗೂ ಒಬ್ಬ ಅಬಕಾರಿ ಪೇದೆ (ಬೀಟ್ ಕಾನ್ಸಟೇಬಲ್) ಸೇರಿದಂತೆ ಒಟ್ಟು 5 ಜನರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಪಡಿಸಿ ಅಬಕಾರಿ ಆಯುಕ್ತರು ಆದೇಶ ಹೊರಡಿಸಿದ್ದಾರೆ.ಅಬಕಾರಿ ಅಧಿಕಾರಿಗಳು ಸಸ್ಪೆಂಡ್ jk02_new jk02 new

Key words: Mysore, Bar and restaurant, fire, Excise officials, suspended