ಆರ್.ಸಿಬಿ ವಿರುದ್ಧ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿಸಿದ ಚೆನ್ನೈ ಸೂಪರ್ ಕಿಂಗ್ಸ್

ಬೆಂಗಳೂರು, ಸೆಪ್ಟೆಂಬರ್ 25, 2021 (www.justkannda.in): ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿರುದ್ಧ ಸಿಎಎಸ್​ಕೆ ತಂಡ 6 ವಿಕೆಟ್​ಗಳಿಂದ ಜಯಭೇರಿ ಭಾರಿಸಿತು. ಈ ಮೂಲಕ ಅಂಕ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ.
ಆರ್​ಸಿಬಿ ತಂಡ ಗೆಲ್ಲಲು ಒಡ್ಡಿದ 157 ರನ್ ಗುರಿಯನ್ನು ಇನ್ನೂ ಹಲವು ಎಸೆತಗಳು ಬಾಕಿ ಇರುವಂತೆ ಗೆಲುವು ಸಾಧಿಸಿತು. ಈ ಮೂಲಕ ಪಾಯಿಂಟ್ಸ್ ಪಟ್ಟಿಯಲ್ಲಿ ಮತ್ತೊಮ್ಮೆ ಅಗ್ರಸ್ಥಾನಕ್ಕೇರಿತು.

ಚಿಕ್ಕ ಬೌಂಡರಿ ಇರುವ ಶಾರ್ಜಾ ಮೈದಾನದಲ್ಲಿ ಆರ್​ಸಿಬಿ ಒಡ್ಡಿದ ಸವಾಲು ಸಿಎಸ್​ಕೆ ದೊಡ್ಡದಾಗಿರಲಿಲ್ಲ. ಎಲ್ಲಾ ಬ್ಯಾಟರ್​ಗಳು ತಂಡದ ಗೆಲುವಿನಲ್ಲಿ ಕೊಡುಗೆ ನೀಡಿದರು.

ಮೊದಲಿಗೆ ಆರ್​ಸಿಬಿ ಮತ್ತು ಸಿಎಎಸ್​ಕೆ ಪಂದ್ಯ ಆರಂಭಕ್ಕೆ ಮರಳು ಬಿರುಗಾಳಿ ಸ್ವಲ್ಪ ಹೊತ್ತು ವಿಳಂಬಗೊಳಿಸಿತು. ನಂತರ ಸಿಎಸ್​ಕೆ ಕ್ಯಾಪ್ಟನ್ ಎಂ ಎಸ್ ಧೋನಿ ಟಾಸ್ ಗೆದ್ದು ಆರ್​ಸಿಬಿಗೆ ಮೊದಲು ಬ್ಯಾಟ್ ಮಾಡಲು ಆಹ್ವಾನಿಸಿದ್ದರು.

key words: Chennai Super Kings won against RCB and topped the list